ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಿಸಬೇಕು. ಆಕರ್ಷಕವಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಹೀಗಾಗಿ ಏನೇನೋ ಸರ್ಕಸ್ ಮಾಡಿ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಗಳ ಮೊರೆ ಹೋಗುತ್ತಾರೆ. ಆದರೆ, ಈ ಕುರಿತು ಎಚ್ಚರ ವಹಿಸುವುದು ಮಾತ್ರ ಅವಶ್ಯವಿದೆ.
ಮಾರುಕಟ್ಟೆಯಲ್ಲಿ ಸಿಗೋ ಕ್ರೀಮ್ ಬಳಸುವುದರಿಂದ ನಿಮ್ಮ ಚರ್ಮದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅಂತ ತಿಳಿದುಕೊಳ್ಳಬೇಕು ಅಂದ್ರೆ ಈ ಸ್ಟೋರಿ ಓದಿ.
ಹೌದು! ಇತ್ತಿಚಿನ ದಿನಗಳಲ್ಲಿ ತಾವು ಸುಂದರವಾಗಿ ಕಾಣಬೇಕು ಅಂತ ಕೆಲವು ಯುವಕ- ಯುವತಿಯರು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳ ಮೊರೆ ಹೋಗುತ್ತಾರೆ. ಈ ಕ್ರೀಮ್ ಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ಆ ಕ್ಷಣಕ್ಕೆ ಕಾಂತಿಯುತವಾಗಿ ಕಾಣುತ್ತದೆ. ಆದರೆ, ಕ್ರಮೇಣ ವಯಸಾಗುತ್ತಾ, ನಿಮ್ಮ ಚರ್ಮ ಬೇಗ ಸುಕ್ಕುಗಟ್ಟುವುದರ ಜೊತೆಗೆ ಬೇಗ ವಯಸ್ಸಾದವರಂತೆ ಕಾಣಬಹುದು. ಆದ್ದರಿಂದ ಆದಷ್ಟು ಕೆಮಿಕಲ್ ಇರುವ ಕ್ರೀಮ್ ಗಳನ್ನು ಬಳಸುವುದನ್ನು ಕಡಿಮೆ ಮಾಡಿ. ಮೊದಲು ಜಂಕ್ ಫುಡ್ ತಿನ್ನೊದನ್ನು ಕಡಿಮೆ ಮಾಡಿ. ಯತೇಚ್ಛವಾಗಿ ನೀರು ಕುಡಿಯಿರಿ.
ಆದಷ್ಟು ಹಣ್ಣು -ತರಕಾರಿಗಳನ್ನು ಜಾಸ್ತಿ ಸೇವಿಸಿ. ನಿಮ್ಮ ಸ್ಕಿನ್ ಚೆನ್ನಾಗಿರಬೇಕು ಅಂದರೆ ಕ್ಯಾರೆಟ್, ಗಜ್ಜರಿ, ಕಿತ್ತಳೆ, ಪಪ್ಪಾಯ, ದಾಳಿಂಬೆಯಂತಹ ಹಣ್ಣು -ತರಕಾರಿಯನ್ನು ಸೇವಿಸಬೇಕು. ಇನ್ನು ನಿಮ್ಮ ಸ್ಕಿನ್ ಯಾವಾಗಲೂ ಹೈಡ್ರೇಟ್ ಆಗಿ ಇರಬೇಕು ಅಂದ್ರೆ, ಈ ಅಂಗಡಿಯಲ್ಲಿ ಸಿಗುವ ರೆಡಿಮೇಡ್ ಜ್ಯೂಸ್ ಕುಡಿಯುವ ಬದಲು ನಿಂಬೆ ಹಣ್ಣಿನ ಜ್ಯೂಸ್, ಎಳನೀರು, ಹಾಲು ಮಜ್ಜಿಗೆಯನ್ನು ಸೇವಿಸಿ. ಇದರಿಂದಾಗಿ ನಿಮ್ಮ ದೇಹಕ್ಕೆ ನೀರಿನಾಂಶ ಸಿಗುವುದರ ಜೊತೆಗೆ ಸ್ಕಿನ್ ಗ್ಲೋ ಆಗುತ್ತೆ. ಇನ್ನು ಹೆಚ್ಚಿನ ಹೆಲ್ತ್ ಟಿಪ್ಸ್‌ಗಾಗಿ ನಮ್ಮ ಕರ್ನಾಟಕ ನ್ಯೂಸ್ ಬೀಟ್ ಫಾಲೋ ಮಾಡಿ…



















