ನಟ ಶ್ರೀಮುರುಳಿ ನಟಿಸಿರುವ ಬಘೀರ ಚಿತ್ರವು ಭರ್ಜರಿ ಕಲೆಕ್ಷನ್ ನತ್ತ ಮುಖ ಮಾಡಿದೆ.
ಶ್ರೀಮುರುಳಿ ಸದ್ಯ ಜಯದ ಹಾದಿಗೆ ಮರುಳಬೇಕಿತ್ತು. ಹೀಗಾಗಿ ಈ ಚಿತ್ರದ ಗೆಲುವು ಅವರಿಗೆ ಅವಶ್ಯವಾಗಿತ್ತು. ‘ಟ್ರೇಲರ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಮಾಡಿದ್ದ ‘ಬಘೀರ’ ಚಿತ್ರ ಥಿಯೇಟರ್ ನಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡುತ್ತಿದೆ. ಡಾ. ಸೂರಿ ನಿರ್ದೇಶಿಸಿರುವ ‘ಬಘೀರ’ ಚಿತ್ರ ಕಲೆಕ್ಷನ್ ನಲ್ಲೂ ಧೂಳೆಬ್ಬಿಸಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರು ಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ ಶ್ರೀಮುರಳಿಗೆ ಜೊತೆಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ.
ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಗರುಡ ರಾಮ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾನ ನಿರ್ಮಾಣ ಮಾಡಿದೆ. ‘ಬಘೀರ’ ಚಿತ್ರ ಬರೋಬ್ಬರಿ 2.8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಈ ಚಿತ್ರಕ್ಕೆ ಮೊದಲ ದಿನ ವಿಮರ್ಶಕರಿಂದ ಮೆಚ್ಚುಗೆ ಸಿಕ್ಕಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಭರ್ಜರಿ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.