ಚಾಮರಾಜನಗರ: ಮೋದಿ ಸಾಹೇಬರು ಎಷ್ಟು ಖರ್ಚು ಮಾಡುತ್ತಿದ್ದಾರೆ? ಮೋದಿಯವರ ದಿನದ ಖರ್ಚು ಏಷ್ಟು ಎಂದು ಮೊದಲು ರಿವೀಲ್ ಮಾಡಿ, ಆರೋಪ ಮಾಡೋದಕ್ಕೂ ಒಂದು ರೀತಿ ನೀತಿ ಇರಬೇಕು ಎಂದು ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ಬೊಕ್ಕಸ ಖಾಲಿಯಾಗಿದೆ. ಸಾರಿಗೆ ನೌಕರರಿಗೆ ನೀಡಲು ಹಣ ಇಲ್ಲ. ಸಿದ್ದರಾಮಯ್ಯ ಅವರ ದಿನದ ಕಾಫಿ ಟೀ ಖರ್ಚು 11 ಲಕ್ಷ ರೂ. ಆಗುತ್ತದೆ ಎಂಬ ಆರೋಪಕ್ಕೆ ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ನೌಕರರಿಗೆ ಬಾಕಿ ಕೋಡುವುದರಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ ನಿಜ. ಆದರೆ ನಾವು ಬಂದಾಗಿನಿಂದ 5 ಸಾವಿರಕ್ಕೂ ಹೆಚ್ಚು ಹೊಸ ಬಸ್ ಗಳನ್ನು ಖರೀದಿ ಮಾಡಿದ್ದೇವೆ. 6 ಸಾವಿರ ಮಂದಿಗೆ ಉದ್ಯೋಗವನ್ನ ನೀಡಿದ್ದೇವೆ ಎಂದು ಹೇಳಿದ್ದಾರೆ.
ಆಕ್ಸಿಜನ್ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಬದ್ದವಾಗಿದೆ. ತಡವಾಗಿರುವುದಕ್ಕೆ ಕ್ಷಮೆ ಕೇಳುತ್ತೇವೆ. ಇಡೀ ದೇಶದಲ್ಲಿ ಕೊರೋನಾದಿಂದ 40 ಲಕ್ಷ ಜನ ಸತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಕೇವಲ 4 ಲಕ್ಷ ಎಂದು ಸುಳ್ಳು ಹೇಳಿದರು. ಕೋವಿಡ್ ವ್ಯಾಕ್ಷಿನೇಷನ್ ಸರ್ಟಿಫಿಕೇಟ್ ಮೇಲೆ ಮೋದಿ ಫೋಟೋ ಹಾಕಿದ್ದರು. ಆದರೆ ಸರ್ಟಿಫಿಕೇಟ್ ಮೇಲಿದ್ದ ಮೋದಿ ಫೋಟೋ ಕಾಣೆಯಾಗಿದೆ. ಕೋವಿಡ್ ವ್ಯಾಕ್ಸಿನೇಷನ್ ನಿಂದ ಸಮಸ್ಯೆ ಆಗುತ್ತಾ? ಇದೆ ಎಂದು ಯಾವಾಗ ಪ್ರಚಾರ ಆಯಿತೊ ನಂತರ ಸರ್ಟಿಫಿಕೇಟ್ ಮೇಲೆ ಇದ್ದ ಮೋದಿ ಫೋಟೋ ನಾಪತ್ತೆಯಾಗಿದೆ ಎಂದು ಕಿಡಿಕಾರಿದ್ದಾರೆ.