ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಬಗೆದಷ್ಟು ಬಯಲಾಗುತ್ತಿದೆ. ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳು ನಟಿ ರನ್ಯಾ ರಾವ್ ದುಬೈನಿಂದ ಗೋಲ್ಡ್ ತರುವ ಏಜೆಂಟ್ ಆಗಿದ್ದಳು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಹಲವು ಮಾಹಿತಿ ಲಭ್ಯವಾಗಿದೆ.
ಕಳೆದ ಸೋಮವಾರ ನಟಿ ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾಳೆ. ಅಧಿಕಾರಿಗಳು ಆಕೆಯನ್ನು ತಪಾಸಣೆ ನಡೆಸಿದ ವೇಳೆ, ಆಕೆಯ ಸೊಂಟದಲ್ಲಿದ್ದ ಬೆಲ್ಟ್‌ನಲ್ಲಿ ಬರೋಬ್ಬರಿ 14 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದ್ದು, ಅಧಿಕಾರಿಗಳೇ ಶಾಕ್‌ಗೆ ಒಳಗಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಟಿ ರನ್ಯಾ ರಾವ್‌ರನ್ನು ತಪಾಸಣೆಗೆ ವಿಮಾನನಿಲ್ದಾಣದಲ್ಲಿ ಒಳಪಡಿಸಿದಾಗ ಆಕೆಯ ಬಳಿ 14 ಕೆಜಿ ಗಟ್ಟಿ ಚಿನ್ನ ಪತ್ತೆಯಾಗಿದೆ. ಆಕೆ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ದುಬೈಗೆ ಹೋಗಿ ಬರುತ್ತಿದ್ದಳು. ತಾನೊಬ್ಬ ಪ್ರಭಾವಿ ಪೊಲೀಸ್ ಅಧಿಕಾರಿಯ ಮಗಳು ಎಂದು ಹೇಳಿಕೊಂಡು ಯಾವುದೇ ತಪಾಸಣೆಗೆ ಒಳಪಡದೇ ಹಲವು ಬಾರಿ ಆಕೆ ವಿಮಾನನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದಳು. ಕಳೆದ 15 ದಿನಗಳಲ್ಲಿ ಆಕೆ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದು, ಅಧಿಕಾರಿಗಳು ಯಾವ ಕಾರಣಕ್ಕೆ ಹೀಗೆ ದುಬೈ ಪ್ರವಾಸ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಈಕೆ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿರುವ ವಿಚಾರ ಗೊತ್ತಿದೆ. ಹೀಗಾಗಿಯೇ ಆಕೆಯ ಬೆನ್ನು ಹತ್ತಿದ ಅಧಿಕಾರಿಗಳಿಗೆ ಮೊನ್ನೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನ ಹಾಗೂ ನಗದು ಸಿಕ್ಕಿದ್ದು, ಅದನ್ನೀಗ ವಶಕ್ಕೆ ಪಡೆದಿದ್ದಾರೆ.
ಇತ್ತ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ಅಧಿಕಾರಿಗಳು, 14 ದಿನಗಳ ಕಾಲ ಆಕೆಗೆ ನ್ಯಾಯಾಂಗ ಬಂಧನ ಕೊಡಿಸುವಲ್ಲಿ ಸಫಲರಾಗಿದ್ದರು. ಬಳಿಕ ಆಕೆಯನ್ನು ವಿಚಾರಣೆಯ ಭಾಗವಾಗಿ ಮನೆಗೆ ಕರೆದುಕೊಂಡು ಹೊಇದ ಅಧಿಕಾರಿಗಳಿಗೆ, ಮನೆಯಲ್ಲೂ ಕೂಡ ಎರಡು ಕೆಜಿ ಗಟ್ಟಿ ಚಿನ್ನ ಸಿಕ್ಕಿದ್ದು, 2.5 ಕೋಟಿ ರೂಪಾಯಿ ನಗದು ಸಿಕ್ಕಿದೆ.
ಇನ್ನು ನಟಿ ರನ್ಯಾ ರಾವ್ 2014 ರ ಬ್ಯಾಚ್‌ನ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಳು. ಬೆಂಗಳೂರಿನ ಪ್ರತಿಷ್ಠಿತ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವೀಧರೆ ಆಗಿದ್ದಳು. ಇದಾದ ಮೇಲೆ ನಟ ಸುದೀಪ್ ಅಭಿನಯದ ಮಾಣಿಕ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಗಣೇಶ್ ಅಭಿನಯದ ಪಟಾಕಿ ಚಿತ್ರದಲ್ಲೂ ಅಭಿನಯಿಸಿದ್ದಾರೆ. ತಮಿಳು ಚಿತ್ರದಲ್ಲೂ ಆಕೆ ನಟಿಸಿದ್ದು, ಗೋಲ್ಡ್ ಬಿಸಿನೆಸ್ ಆಕೆ ಮೈಗೂಡಿಸಿಕೊಂಡಿದ್ದಳು ಎಂಬ ಮಾಹಿತಿ ಹೊರಬಿದ್ದಿದೆ.
ವಿಶೇಷ ಅಂದರೆ ಮಾರುಕಟ್ಟೆಯಲ್ಲಿ ಸಿಗುವ 9.14 ಹಾಲ್‌ಮಾರ್ಕ್ ಗೋಲ್ಡ್‌ಗಿಂತಲೂ ಅಪ್ಪಟ ಚಿನ್ನ 99.990 ಚಿನ್ನವನ್ನೇ ಆಕೆ ದುಬೈನಿಂದ ಬೆಂಗಳೂರಿಗೆ ತರುತ್ತಿದ್ದಳು ಎಂಬ ಮಾಹಿತಿ ಸಿಕ್ಕಿದೆ.
ಇಷ್ಟೆಲ್ಲದರ ಮಧ್ಯೆ ನಟಿ ರನ್ಯಾ ರಾವ್ ಆರ್ಥಿಕ ಅಪರಾಧಗಳ ಆರೋಪ ಎದುರಿಸುತ್ತಿರುವ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಂದು ಮಧ್ಯಾಹ್ನ ಕೋರ್ಟ್‌ನಲ್ಲಿ ಆಕೆಯ ಜಾಮೀನು ಭವಿಷ್ಯ ನಿರ್ಧಾರವಾಗಲಿದ್ದು, ರನ್ಯಾ ರಾವ್‌ಗೆ ಜೈಲಾ, ಬೇಲಾ ತಿಳಿಯಬೇಕಿದೆ.