ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಆರಂಭದಲ್ಲಿ ಭರ್ಜರಿಯಾಗಿಯೇ ಅಬ್ಬರಿಸಿತ್ತು. ಇದನ್ನು ನೋಡಿದರೆ, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈಗ ನಿರೀಕ್ಷೆ ಹುಸಿಯಾಗುತ್ತಿದೆ.
ಚಿತ್ರವು ಬಿಡುಗಡೆಯಾದ ಮೂರು ದಿನ ಮಾತ್ರ ಭರ್ಜರಿ ಗಳಿಕೆ ಮಾಡಿತ್ತು. ಆದರೆ, ಈಗ ಚಿತ್ರದ ಗಳಿಕೆ ನಿಧಾನವಾಗಿ ಕುಗ್ಗುತ್ತಿದೆ. ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ಬಿಡುಗಡೆಯಾಗಿತ್ತು. ತಮಿಳಿನಲ್ಲಿ ‘ವೆಟ್ಟೈಯಾನ್’, ಹಿಂದಿಯಲ್ಲಿ ‘ಜಿಗ್ರಾ’ ಸಿನಿಮಾಗಳು ಬಿಡುಗಡೆಯಾದ ಹೊರತಾಗಿಯೂ ‘ಮಾರ್ಟಿನ್’ ಮೊದಲ ಮೂರು ದಿನ ಉತ್ತಮ ಗಳಿಕೆ ಮಾಡಿತ್ತು. ‘ಮಾರ್ಟಿನ್’ ಚಿತ್ರ ಐದನೇ ದಿನ ಮಂಗಳವಾರ 1 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಮೊದಲ ದಿನ ಈ ಚಿತ್ರ 6.7 ಕೋಟಿ ರೂ, ಎರಡನೇ ದಿನ 5.5 ಕೋಟಿ ರೂ., ಮೂರನೇ ದಿನ 3.35 ಕೋಟಿ ರೂ., ನಾಲ್ಕನೇ ದಿನ 1.35 ಕೋಟಿ ರೂ., ಐದನೇ ದಿನ 1 ಕೋಟಿ ರೂ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 18 ಕೋಟಿ ರೂ. ಆಗಿದೆ.
18 ಕೋಟಿ ರೂಪಾಯಿ ದೊಡ್ಡ ಮೊತ್ತವೇ. ಆದರೆ, ಚಿತ್ರದ ಬಜೆಟ್ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತುಂಬಾ ಚಿಕ್ಕದು ಎನ್ನಲಾಗಿದೆ. ನಿರ್ಮಾಪಕ ಉದಯ್ ಮೆಹ್ತಾ ಈ ಚಿತ್ರಕ್ಕೆ ಬರೋಬ್ಬರಿ 100 ಕೋಟಿ ರೂ. ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಿತ್ರದಿಂದ ದೊಡ್ಡ ನಷ್ಟ ಉಂಟಾಗಿದೆ ಎನ್ನಲಾಗುತ್ತಿದೆ.