ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಕಸದ ಲಾರಿಗೆ ಬಾಲಕ ಬಲಿಯಾಗಿದ್ದಾನೆ. ಹೀಗಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಸದ ಲಾರಿಗೆ ಇನ್ನೆಷ್ಟು ಬಲಿ ಬೇಕು ಎಂದು ಪ್ರಶ್ನಿಸುತ್ತಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಯಮ ಸ್ವರೂಪ ಬಿಬಿಎಂಪಿ ಕಸದ ಲಾರಿಗಳು ಈಗಾಗಲೇ ಸಾಕಷ್ಟು ಬಲಿ ಪಡೆದಿವೆ. ಎರಡು ದಿನಗಳ ಹಿಂದೆ 10ವರ್ಷದ ಬಾಲಕನನ್ನು ಕಸದ ಲಾರಿ ಬಲಿ ಪಡೆದಿದೆ. ಅಡ್ಡಾದಿಡ್ಡಿ ಚಾಲನೆ, ಓವರ್ ಸ್ಪೀಡ್, ನಿಯಮ ಪಾಲನೆಗಳಿಲ್ಲದೇ ಇಂತಹ ಅಪಘಾತಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಇಷ್ಟೊಂದು ಸಾಲು ಸಾಲು ಸಾವುಗಳು ಸಂಭವಿಸಿದರೂ ಬಿಬಿಎಂಪಿಯಿಂದ ಮಾತ್ರ ಯಾವುದೇ ಶಿಸ್ತಿನ ಕ್ರಮ ಕೈಗೊಂಡಿಲ್ಲ. ಕಸದ ಟೆಂಡರ್ ನೀಡಿದ ಬಳಿಕ ಬಿಬಿಎಂಪಿ ಕಣ್ಮುಚ್ಚಿ ಕುಳಿತುಕೊಂಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ, ಇನ್ನೊಂದೆಡೆ ಸಾವುಗಳ ಸರಣಿ ಮಾತ್ರ ಮುಂದುವರೆದಿದೆ.
ಕಸದ ಲಾರಿಗೆ ಬಲಿಯಾದ ಅಮಾಯಕರು!
ದಿನಾಂಕ- 22-09-2018
ಸ್ಥಳ: ತುಮಕೂರು ರಸ್ತೆಯ CMTI ಜಂಕ್ಷನ್ 30 ವರ್ಷದ ಭುವನೇಶ್ವರಿ ಎಂಬ ಮಹಿಳೆ ಬಲಿ
ದಿನಾಂಕ- 21-03-2022
ಸ್ಥಳ: ಹೆಬ್ಬಾಳ
ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಕ್ಷತಾ ಬಲಿ
ದಿನಾಂಕ 31-03-2022
ಸ್ಥಳ: ಥಣಿಸಂದ್ರ ಮುಖ್ಯ
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸವಾರನ ಸಾವು
76 ವರ್ಷದ ರಾಮಯ್ಯ ಎಂಬ ವೃದ್ಧ ಬಲಿ
ದಿನಾಂಕ- 18-04- 2022
ಸ್ಥಳ: ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್
ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಮಹಿಳೆ ಮೇಲೆ ಹರಿದ ಕಸದ ಲಾರಿ
SBI ಬ್ಯಾಂಕ್ ಉದ್ಯೋಗಿ ಪದ್ಮಿನಿ (40) ಬಲಿ
ದಿನಾಂಕ- 5-05-2022
ಸ್ಥಳ: ನಾಗವಾರ ಮುಖ್ಯ ರಸ್ತೆ
ಸ್ವಿಗ್ಗಿ ಡಿಲಿವರಿ ಬಾಯ್ ನ ಪ್ರಾಣ ತೆಗೆದ ಬಿಬಿಎಂಪಿ ಕಸದ ಲಾರಿ
25 ವರ್ಷದ ದೇವಣ್ಣ ಎಂಬ ಯುವಕ ಬಲಿ
ದಿನಾಂಕ- 10-07-2022
ಸ್ಥಳ: ನಾಗರಬಾವಿ ಸರ್ಕಲ್
ದ್ವಿಚಕ್ರ ವಾಹನದ ಮೇಲೆ ಹರಿದ ಬಿಬಿಎಂಪಿ ಕಸದ ಲಾರಿ
37 ವರ್ಷದ ಕಲಾ ಎಂಬ ಮಹಿಳೆ ಸಾವು
ಪತಿ ಯೋಗೇಂದ್ರ ಅವರ ಸ್ಥಿತಿ ಗಂಭೀರ
ದಿನಾಂಕ 29-11-2022
ಸ್ಥಳ : ದೊಡ್ಡಬಳ್ಳಾಪುರದ ಚಿಗರೇನಹಳ್ಳಿ ಡಂಪ್ ಯಾರ್ಡ್
ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಯುವಕರು ಬಲಿ
ಮಾರುತಿ ಮತ್ತು ಮಹೇಶ್ ಮೃತ ದುರ್ದೈವಿಗಳು
ದಿನಾಂಕ 17-07-2023
ಸ್ಥಳ: ಹಡ್ಸನ್ ಸರ್ಕಲ್
ರಸ್ತೆ ದಾಟುತ್ತಿದ್ದ ಮಹಿಳೆಗೆ ಗುದ್ದಿದ್ದ ಬಿಬಿಎಂಪಿ ಕಸದ ಲಾರಿ
60ವರ್ಷದ ಮುನಿಯಮ್ಮ ಎಂಬ ವೃದ್ಧೆ ಸಾವು
ದಿನಾಂಕ 25-09-2023
ನವವಿವಾಹಿತನ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ
ಸ್ಥಳ: ಜಯನಗರದ ಮೆಟ್ರೋ ಸ್ಟೇಷನ್ ಬಳಿ ಘಟನೆ
ರಾಮನಗರದ ಯಶವಂತ ಮೃತ ಪಟ್ಟ ಯುವಕ
ದಿನಾಂಕ 29-01-20224
ಸ್ಥಳ : ಪುಲಕೇಶಿನಗರದ ಮಸೀದ್ ರೋಡ್
14 ವರ್ಷದ ವಿದ್ಯಾರ್ಥಿನಿ ಮೇಲೆ ಹರಿದ ಬಿಬಿಎಂಪಿ ಕಸದ ಲಾರಿ
ದಿನಾಂಕ -28-07-2024
ಸ್ಥಳ: ಶೇಷಾದ್ರಿ ರೋಡ್ ಕೆಆರ್ ಸರ್ಕಲ್
ಇಬ್ಬರ ಸಾವಿಗೆ ಕಾರಣವಾಗಿರುವ ಬಿಬಿಎಂಪಿ ಕಸದ ಲಾರಿ
ಟೆಕ್ಕಿಗಳಾದ ಯುವಕ ಪ್ರಶಾಂತ್ (25) ಶಿಲ್ಪಾ(27) ಸಾವು
ದಿನಾಂಕ 13-08-2024
ಸ್ಥಳ: ಜಂಬೂಸಾವರಿ ದಿಣ್ಣೆ- ಜೆಪಿನಗರ
ರಸ್ತೆ ದಾಟುತ್ತಿದ್ದ ಮಹಿಳೆಗೆ ಗುದ್ದಿದ ಕಸದ ಲಾರಿ
69 ವರ್ಷದ ಆದಿಲಕ್ಷ್ಮಮ್ಮ ಮೃತಪಟ್ಟಿದ್ದರು.
ದಿನಾಂಕ – 05-01-2025
ಸ್ಥಳ: ನಾಗವಾರ ಮುಖ್ಯ ರಸ್ತೆ, ಥಣಿಸಂದ್ರ
ಸಹೋದರಿಯರನ್ನು ಬಲಿ ಪಡೆದಿದ್ದ ಕಸದ ಲಾರಿ- ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ನಾಸೀಯಾ ಸುಲ್ತಾನ್ ಮತ್ತು ನಾಸೀಯಾ ಇರ್ಫಾನ್ ಎಂಬ ಮಹಿಳೆಯರನ್ನು ಬಲಿ ಪಡೆದ ಕಸದ ಲಾರಿ
ದಿನಾಂಕ 29-03-2025
ಸ್ಥಳ ಥಣಿಸಂದ್ರ
ತಂದೆ ಜೊತೆ ಬೈಕ್‌ನಲ್ಲಿ ಹೋಗುವಾಗ ಬೈಕ್‌ಗೆ ಡಿಕ್ಕಿ
10 ವರ್ಷದ ಐಮಾನ್ ಮೃತ ಬಾಲಕ