Daaku Maharaaj: ನಂದಮೂರಿ ಬಾಲಕೃಷ್ಣ ಅರ್ಥಾತ್ ಬಾಲಯ್ಯ ಅಭಿನಯದ ಡಾಕು ಮಹಾರಾಜ್ ಸಿನಿಮಾವು ಒಟಿಟಿಗೆ ಲಗ್ಗೆ ಇಟ್ಟಿದೆ. ನೆಟ್ ಫ್ಲಿಕ್ಸ್ ನಲ್ಲಿ ಬಾಲಯ್ಯ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಇದರ ಬೆನ್ನಲ್ಲೇ, ಡಾಕು ಮಹಾರಾಜ್ (Daaku Maharaaj) ಸಿನಿಮಾದಲ್ಲಿ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಅಭಿನಯಿಸಲು ಮೂರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಡಾಕು ಮಹಾರಾಜ್ ಸಿನಿಮಾದಲ್ಲಿ ಊರ್ವಶಿ ರೌಟೇಲಾ ಅವರು ಬಾಲಯ್ಯ ಜತೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಇಡೀ ಸಿನಿಮಾದಲ್ಲಿ ಊರ್ವಶಿ ರೌಟೇಲಾ ಅವರು ಮೂರು ನಿಮಿಷ ಕಾಣಿಸಿಕೊಂಡಿದ್ದಾರೆ. ಇಷ್ಟೇ ಸಣ್ಣ ಪಾತ್ರಕ್ಕೆ ಊರ್ವಶಿ ರೌಟೇಲಾ ಅವರು ಮೂರು ಕೋಟಿ ರೂಪಾಯಿಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ, ಊರ್ವಶಿ ಅವರು ಒಂದು ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಪಡೆದಂತಾಗಿದೆ.
ಊರ್ವಶಿ ಸೀನ್ ಗಳಿಗೆ ಕತ್ತರಿ
ಇದರ ಮಧ್ಯೆಯೇ, ಡಾಕು ಮಹಾರಾಜ್ ಸಿನಿಮಾದಲ್ಲಿ ಊರ್ವಶಿ ರೌಟೇಲಾ ದೃಶ್ಯಗಳಿಗೆ ನೆಟ್ ಫ್ಲಿಕ್ಸ್ ಕತ್ತರಿ ಹಾಕಿದೆ ಎಂಬ ವದಂತಿ ಹರಡಿದೆ. ಡಾಕು ಮಹಾರಾಜ್ ಸ್ಟ್ರೀಮಿಂಗ್ ಆಗುವ ಮುನ್ನ ನೆಟ್ ಫ್ಲಿಕ್ಸ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಊರ್ವಶಿ ಕಾಣಿಸಿಕೊಳ್ಳದಿರುವ ಕಾರಣ ಇಂತಹ ಮಾತುಗಳು ಕೇಳಿಬಂದಿವೆ. ಆದಾಗ್ಯೂ, ದೃಶ್ಯಗಳಿಗೆ ಕತ್ತರಿ ಹಾಕಿರುವ ಕುರಿತು ಸಿನಿಮಾ ತಂಡದಿಂದ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಬಾಲಯ್ಯ, ಪ್ರಕಾಶ್ ರಾಜ್, ಬಾಬಿ ಡಿಯೋಲ್, ಕನ್ನಡದ ಶ್ರದ್ಧಾ ಶ್ರೀನಾಥ್, ಪ್ರಕಾಶ್ ರಾಜ್ ಸೇರಿ ಹಲವು ತಾರಾಗಣ ಇರುವ ಸಿನಿಮಾ ಕಳೆದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಗೆ ಉತ್ತಮ ಸ್ಪಂದನೆ ದೊರೆತು, 100 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಿನಿಮಾ ಈಗ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ.