ಬೆಂಗಳೂರು: ಮಾರುಕಟ್ಟೆಯಲ್ಲಿ ಲಕ್ಷ ರೂಪಾಯಿ ಗಡಿಯ ಸಮೀಪ ಬಂದು ನಿಂತಿರುವ ಚಿನ್ನ ಏರಿಳಿತ ಕಾಣುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದೆ.
ಬುಧವಾರ 10 ರೂ ಹೆಚ್ಚಳಗೊಂಡಿದೆ. ಚಿನ್ನದ ಬೆಲೆ ಏರಿಕೆಯೊಂದಿಗೆ ಬೆಳ್ಳಿ ಕೂಡ ಏರಿಕೆಯ ಹಾದಿ ಹಿಡಿಯುತ್ತಿದೆ. ದೇಶದಲ್ಲಿ ಇಂದು 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 90,900 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 99,170 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 10,200 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 90,900 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 10,200 ರೂ. ಇದೆ.
ಇಂದು ದೇಶದಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 90,900 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 99,170 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,380 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ., ಆಗಿದೆ.
ನಾವು ನೀಡಿರುವ ಚಿನ್ನ ಹಾಗೂ ಬೆಳ್ಳಿಯ ಬೆಲೆಯೇ ನಿಖರ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಮಾರುಕಟ್ಟೆಯಲ್ಲಿನ ಕೆಲವು ಅಂಗಡಿಗಳ ದರ ಆಧರಿಸಿ ಇಲ್ಲಿ ನೀಡಲಾಗಿದೆ. ಇದಲ್ಲದೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹಲವು ಶುಲ್ಕಗಳು ಕೂಡ ಇರುತ್ತವೆ.