ಬೆಂಗಳೂರು: ಮಾರುಕಟ್ಟೆಯಲ್ಲಿ ಏರಿಳಿತದ ಹಾದಿ ಹಿಡಿದಿರುವ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಇಂದು ಕೂಡ ವ್ಯತ್ಯಾಸವಾಗಿದೆ.
ಇಂದು ಚಿನ್ನ 130 ರೂ.ನಷ್ಟು ಕಡಿಮೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯ ಏರಿಕೆ 125 ರೂ.ಗೆ ಸೀಮಿತವಾಗಿದೆ. ಬೆಳ್ಳಿ ಬೆಲೆ ವಾರಾಂತ್ಯದಲ್ಲಿ ಏರಿಕೆ ಕಾಣದಿದ್ದರೂ ಕಳೆದ ಹತ್ತು ದಿನದಲ್ಲಿ ಬರೋಬ್ಬರಿ 7 ರೂ.ಗಳಷ್ಟು ಹೆಚ್ಚಳವಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 89,800 ರೂ. ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 97,970 ರೂ. ಆಗಿದೆ. 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,480 ರೂ. ಇದೆ. 100 ಗ್ರಾಂ ಬೆಳ್ಳಿ ಬೆಲೆ 10,700 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 89,800 ರೂ. ಇದೆ. ಬೆಳ್ಳಿ ಬೆಲೆ 10 ಗ್ರಾಂಗೆ: 1,070 ರೂ. ಇದೆ.
ನಾವು ನೀಡಿರುವ ಚಿನ್ನದ ಬೆಲೆಯೇ ನಿಖರ ಎಂದು ಹೇಳಲು ಆಗುವುದಿಲ್ಲ. ಪ್ರಮುಖ ಚಿನ್ನಾಭರಣ ಅಂಗಡಿಗಳಿಂದ ಪಡೆದ ಮಾಹಿತಿ ಇದು. ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹಲವು ಶುಲ್ಕಗಳನ್ನು ಕೂಡ ವಿಧಿಸಲಾಗಿರುತ್ತದೆ.