ಹಾವೇರಿ: ಉಗುಳುವ ಖಯಾಲಿ ತಪ್ಪಿಸುವುದಕ್ಕಾಗಿ ಗುಟ್ಕಾ ತಿಂದು ಉಗುಳುವ ಜಾಗದಲ್ಲಿ ದೇವರುಗಳ ಪೋಟೋ ಅಳವಡಿಸಲಾಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಖಾಸಗಿ ಕಟ್ಟಡವೊಂದರಲ್ಲಿ ಹಿಂದೂ ದೇವರುಗಳ ಅವಹೇಳನ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿರುವ ಸೂರಜ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿದೆ.
ಮೆಟ್ಟಿಲುಗಳಲ್ಲಿ ದೇವರುಗಳ ಪೋಟೋ ಅಂಟಿಸಿ ಅವಹೇಳನ ಮಾಡಿದ್ದಾರೆ. ಚಪ್ಪಲಿ ಬಿಡುವ ಜಾಗದಲ್ಲಿ ಹಿಂದೂಗಳ ಫೋಟೋ ಅಳವಡಿಸಲಾಗಿದೆ. ಹೀಗಾಗಿ ಕೆವಿಜಿ ಬ್ಯಾಂಕ್ ಮತ್ತು ಲ್ ಡಿಎಂ ಕಚೇರಿಯ ಸಿಬ್ಬಂದಿಗಳ ನಡೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.