ಬಹುತೇಕ ಜನ ಕಾಲಿನ ಹಿಮ್ಮಡಿ ಬಗ್ಗೆ ಸದಾ ದೂರು ನೀಡುತ್ತಲೇ ಇರುತ್ತಾರೆ. ಪಾದಗಳಲ್ಲಿನ ಬ್ಯಾಕ್ಟೀರಿಯಾಗಳ ನಿವಾರಣೆ ಹಾಗೂ ಹಿಮ್ಮಡಿ ಒಡೆಯುವುದನ್ನು ತಡೆಯಲು ಏನು ಮಾಡಬೇಕು ಎಂಬೆ ಕುರಿತು ಚರ್ಚಿಸುತ್ತಿರುತ್ತಾರೆ.
ಪ್ರತಿ ಬಾರಿ ಪಾದಗಳನ್ನು ತೊಳೆಯಿರಿ!
ನಾವು ದಿನನಿತ್ಯ ನಮ್ಮ ಪಾದಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮುಖ್ಯ. ಮನೆಯಿಂದ ಹೊರಗೆ ಹೋಗಿ ಬಂದ ನಂತರ ಪಾಠಗಳನ್ನು ಬೆಚ್ಚಗಿನ ನೀರಿಂದ ವಾಶ್ ಮಾಡಿದರೆ ಒಳ್ಳೆಯದು ಎಂಬುವುದು ತಜ್ಞರ ಅಭಿಪ್ರಾಯ.

ಬೇವಿನ ಎಣ್ಣೆಯನ್ನು ಬಳಸಿ!
ಹಲವರಿಗೆ ಪಾದಗಳಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿರುತ್ತದೆ. ಹೀಗಾಗಿ ಬೇವಿನ ಎಣ್ಣೆಯನ್ನು ಬಳಸುವುದುರೆ ಒಳ್ಳೆಯದು ಆ ಮನೆಯ ಕೆಲಸ ಎಲ್ಲ ಮುಗಿದ ಬಳಿಕ ಪಾದಗಳನ್ನು ಚೆನ್ನಾಗಿ ತೊಳೆದು ಬೇವಿನ ಎಣ್ಣೆಯನ್ನು ಹಚ್ಚುವುದು ಉತ್ತಮ ಎನ್ನುತ್ತಾರೆ. ಉಗುರುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಬಿಸಿ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಅದರೊಳಗೆ ಕಾಲನ್ನು ಇಟ್ಟು ಹದಿನೈದು ನಿಮಿಷಗಳ ಕಾಲ ತೊಳೆಯುವ ಹವ್ಯಾಸ ಮಾಡಿಕೊಂಡರೆ ಕಾಲಿನ ತುರಿಕೆ ಕಡಿಮೆಯಾಗುತ್ತದೆ ಎಂಬುವುದು ತಜ್ಞರ ಅಭಿಪ್ರಾಯ. ಇಲ್ಲಿ ನಾವು ಹೇಳಿರುವುದು ಸಲಹೆ ಅಷ್ಟೇ. ಆದರೆ, ಇದೇ ನಿಖರ ಅಲ್ಲ. ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ವೈದ್ಯರ ಸಲಹೆ ಮೇಲೆಯೇ ನಿರ್ಧಾರ ಕೈಗೊಳ್ಳಿ.