ಹಿಂದೆಲ್ಲಾ ಉಳುಮೆ ಮಾಡುವುದಕ್ಕೆ ಸಾಮಾನ್ಯವಾಗಿ ಎತ್ತುಗಳು ಹಾಗೂ ಮರದ ಪರಿಕರಗಳನ್ನು ಬಳಸುವುದು ಸಾಮಾನ್ಯ. ಆನಂತರ ತಂತ್ರಜ್ಞಾನ ಅಳವಡಿಸಿಕೊಂಡ ರೈತ ಟ್ರ್ಯಾಕ್ಟರ್ ಮೊರೆ ಹೋದರು. ಆದರೆ, ಇಲ್ಲೋರ್ವ ರೈತ ಆಟೋದಿಂದ ಉಳುಮೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕೆ ಈ ರೀತಿ ಮಾಡಿದ್ದಾನಾ? ಅಥವಾ ನಿಜವಾಗಿಯೂ ತೊಂದರೆಯಿಂದಾಗಿ ಈ ರೀತಿ ಮಾಡಿದ್ದಾನಾ? ತಿಳಿದು ಬಂದಿಲ್ಲ. ಆದರೆ, ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.