ಬೆಂಗಳೂರು: 12 ವರ್ಷದ ಮಗ, ಎರಡನೆ ಗಂಡನನ್ನು ಬಿಟ್ಟು ಇನ್ಸ್ಟಾದಲ್ಲಿ ಪರಿಚಯವಾದ ಪೊಲೀಸ್ ಕಾನ್ಸ್‌ಟೇಬಲ್ ಜೊತೆ ಗೃಹಿಣಿಯೊಬ್ಬಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ನಡೆದಿದೆ.
ಚಂದ್ರಾಲೇಔಟ್ ನಿವಾಸಿ ಮೋನಿಕಾ ಹೆಚ್‌ಎಸ್‌ಆರ್ ಲೇಔಟ್ ಕಾನ್ಸ್‌ಟೇಬಲ್ ರಾಘವೇಂದ್ರ ಜೊತೆ ಪ್ರೀತಿಯಲ್ಲಿ ಬಿದ್ದು ಎರಡನೇ ಗಂಡನನ್ನು ಬಿಟ್ಟು ಪರಾರಿಯಾಗಿದ್ದಾಳೆ. ಮದುವೆಯಾಗಿ ಮಗು ಇರುವ ಕಾನ್ಸ್‌ಟೇಬಲ್ ರಾಘವೇಂದ್ರ ಇನ್ಸ್ಟಾದಲ್ಲಿ ಮೋನಿಕಾಳ ರೀಲ್ಸ್ ನೋಡಿ ಫಿದಾ ಆಗಿದ್ದ. ರೀಲ್ಸ್ ನೋಡಿದ ತಕ್ಷಣ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಮೊದಲ ಗಂಡನನ್ನು ಬಿಟ್ಟು ಎರಡನೇ ಗಂಡನ ಜೊತೆಗಿದ್ದ ಮೋನಿಕಾ ಕಾನ್ಸ್‌ಟೇಬಲ್ ರಾಘವೇಂದ್ರನ ರಿಕ್ವೆಸ್ಟ್ ನೋಡಿ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಪರಿಣಾಮ, ಕೆಲವೇ ದಿನಗಳಲ್ಲಿ ಪರಿಚಯ ಪ್ರೀತಿಯಾಗಿ ಇಬ್ಬರು ಜೊತೆ ಜೊತೆಗೆ ತಿರುಗಾಡಲು ಶುರುಮಾಡಿದ್ದರು. ಅಷ್ಟೇ ಅಲ್ಲದೇ ಇಬ್ಬರೂ ಜೊತೆಯಲ್ಲಿ ಹಲವು ರೀಲ್ಸ್ ಕೂಡ ಮಾಡಿದ್ದಾರೆ.
ಹೇಗೆ ಕಳೆದ ಮೂರು ತಿಂಗಳಿಂದ ಪ್ರತಿದಿನ ಕರೆ ಮಾಡಿ ಮಾತನಾಡುತ್ತಿದ್ದ ರಾಘವೇಂದ್ರ ಮತ್ತು ರೀಲ್ಸ್ ರಾಣಿ ಮೋನಿಕಾ ಮನೆ ಬಿಟ್ಟು ಓಡಿಕೋಗಲು ನಿರ್ಧರ ಮಾಡಿದ್ದಾರೆ. ಅದರಂತೆ ಒಂದಿ ದಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ನನ್ನ ಜೀವನ ರೂಪಿಸಿಕೊಳ್ಳಲು ನಾನು ಹೋಗುತ್ತಿದ್ದೇನೆ, ನನ್ನ ಗಂಡನಿಗೆ ಕರೆಸಿ ಬುದ್ದಿ ಹೇಳಿ ಎಂದು ದೂರು ನೀಡಿದ್ದಾಳೆ. ಆ ದೂರಿನ ಬೆನ್ನಲ್ಲೆ ಚಂದ್ರಲೇಔಟ್ ಪೊಲೀಸರು ಗಂಡನಿಗೆ ಕರೆ ಮಾಡಿ ಕರೆಸಿದ್ದರು. ಗಂಡ ಠಾಣೆಗ ಹೋದಾಗ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣದೊಂದಿಗೆ ಮೋನಿಕ ಎಸ್ಕೇಪ್ ಆಗಿದ್ದಾಳೆ. ಬಳಿಕ ಗಂಡ ಕರೆ ಮಾಡಿದರೂ ಸ್ವೀಕರಿಸದೆ ಮನೆ ಬಿಟ್ಟು ಹೋಗಿದ್ದಾಳೆ. ಕೂಡಲೇ ಮೋನಿಕ ಗಂಡ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಹೆಚ್‌ಎಸ್‌ಆರ್ ಲೇಔಟ್ ಕಾನ್ಸ್‌ಟೇಬಲ್ ರಾಘವೇಂದ್ರ ಮತ್ತು ಮೋನಿಕಾಳ ರೀಲ್ಸ್ ಪುರಾಣದ ಕಥೆ ಗೊತ್ತಾಗಿ ಮೇಲಾಧಿಕಾರಿಗೆ ವಿಚಾರ ಮುಟ್ಟಿಸಿದ್ದಾರೆ. ಈ ಪರಿಣಾಮ ಕಾನ್ಸ್‌ಟೇಬಲ್ ರಾಘವೇಂದ್ರನನ್ನು ಅಮಾನತು ಮಾಡಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಡಿಕೆಶಿ ನಮ್ಮ ಆರಾಧ್ಯ ದೈವ ಅದರಲ್ಲಿ ಎರಡನೇ ಮಾತಿಲ್ಲ | ಶಿವಗಂಗ ಬಸವರಾಜ್


















