ವಿಜಯಪುರ: ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಮಹಿಳೆಯೋರ್ವರು ಬಲಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಈ ಘಟನೆ ನಡೆದಿದೆ. ಸಂಗೀತಾ ಪಾಟೀಲ್ (30) ಸಾವನ್ನಪ್ಪಿರುವ ಮಹಿಳೆ. ಭಾರೀ ಮಳೆ (Heavy Rain)ಗೆ ಮನೆಯ ಮೇಲ್ಛಾವಣಿ (Roof) ಕುಸಿದು ಗೃಹಿಣಿ ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿಯಿಡೀ ವ್ಯಾಪಕವಾಗಿ ಮಳೆ ಸುರಿದಿದೆ. ಮನೆಯಲ್ಲಿ ಮಹಿಳೆ ಮಲಗಿದ್ದ ವೇಳೆ ಮನೆ ಕುಸಿದಿದೆ. ಮಳೆಗೆ ಮನೆ ಸೋರುತ್ತಿದ್ದರಿಂದ ಪತಿ ಹಾಗೂ ಮಕ್ಕಳು ಮನೆಯಿಂದ ಹೊರ ಬಂದಿದ್ದಾರೆ. ಮೇಲ್ಛಾವಣಿ ಬಿದ್ದ ಕಾರಣ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮಣ್ಣಿನಿಂದ ಹೊರ ತೆಗೆಯಲಾಗಿದೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.