ಉಡುಪಿ : ಬ್ರಹ್ಮಾವರ ತಾಲೂಕಿನ ಹೆಗ್ಗುಂಜೆ ಗ್ರಾಮದ ನೀರ್ ಜೆಡ್ಡು ಎಂಬಲ್ಲಿನ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾದ ಅಕ್ರಮ ಕಟ್ಟಡಗಳನ್ನು ಸೋಮವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಆದೇಶದಂತೆ ಹಾಗೂ ಲೋಕಾಯುಕ್ತ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ಬ್ರಹ್ಮಾವರ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು.

ಈ ಕುರಿತಂತೆ ಕಳೆದ 20 ವರ್ಷಗಳಿಂದ ಸರ್ಕಾರಿ ಜಾಗದಲ್ಲಿದ್ದ 1 ಮನೆ, 5 ಶೆಡ್‌ಗಳನ್ನು ನೆಲಸಮಗೊಳಿಸಿದ್ದು, ಈ ಸ್ಥಳದಲ್ಲಿ ವಾಸ್ತವ್ಯ ಮಾಡಿಕೊಂಡಿರುವ ಹೆಗ್ಗುಂಜೆ ಗ್ರಾಮದಲ್ಲಿನ ಕುಡುಬಿ ಜನಾಂಗದ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಬ್ರಹ್ಮಾವರದ ತಾಲ್ಲೂಕು ಕಛೇರಿ ಎದುರುಗಡೆ ತಹಶೀಲ್ದಾರರು ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಿಂದ ಬ್ರಹತ್ ಪ್ರತಿಭಟನೆ ನೆಡೆಸಲಾಗುತ್ತಿದೆ.

ಉಡುಪಿ-ಚಿಕ್ಕಮಗಳೂರು ಸಂಸದರು ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಕುಂದಾಪುರ ಶಾಸಕರು ಕಿರಣ್ ಕುಮಾರ್ ಕೊಡ್ಗಿ ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದರು ಮಾತನಾಡಿ ಬಡವರ ಮನೆ ಒಡೆದಿದ್ದು ಬಹಳ ಬೇಸರದ ಸಂಗತಿ,ರಾಜ್ಯ ಸರ್ಕಾರವನ್ನ ಉಲ್ಲೇಖಿಸಿ ಕುಡುಬಿಯಂತಹ ಕಡುಬಡವರ ಮನೆ ಒಡೆಯುವುದರಿಂದ ಯಾವುದೇ ಸರ್ಕಾರದ ಗೌರವ ಹೆಚ್ಚುವುದಿಲ್ಲ.ಆದರೆ ಆ ಬಡವರ ಮನೆಗೆ ನ್ಯಾಯ ಕೊಟ್ರೆ ನಿಮ್ಮ ಗೌರವ ಉಳಿಯುತ್ತದೆ.ಯಾವ ಅಧಿಕಾರಿಗಳು ಈ ಕೆಲಸವನ್ನು ಮಾಡಿದ್ದಾರೆ 24 ಗಂಟೆ ಒಳಗಡೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಫೆರಿಫರೆಲ್ ರಿಂಗ್ ರಸ್ತೆ ಯೋಜನೆಯ ಭೂ ಸಂತ್ರಸ್ತರಿಂದ BDA ಕಛೇರಿಗೆ ಮುತ್ತಿಗೆಗೆ ಯತ್ನ | ಪರಿಹಾರಕ್ಕಾಗಿ ಸರ್ಕಾರಕ್ಕೆ ಆಗ್ರಹ



















