ಬೆಂಗಳೂರು: ಶೆಡ್ನಲ್ಲಿ ಮಲಗಿದ್ದ ನಾಲ್ವರು ಕಾರ್ಮಿಕರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಮುತ್ಸಂದ್ರ ಗ್ರಾಮದಲ್ಲಿದ್ದ ಲೇಬರ್ ಶೆಡ್ನಲ್ಲಿ ನಡೆದಿದೆ.
ಅಸ್ಸಾಂ ಮೂಲದ ಕಾರ್ಮಿಕರಾದ ಜಯಂತ್ ಸಿಂಧೆ (25), ನಿರೇಂದ್ರನಾಥ್ (24), ಡಾಕ್ಟರ್ ಟೈಡ್ (25), ಧನಂಜಯರ್ ಟೈಡ್ (20) ಮೃತಪಟ್ಟಿದ್ದಾರೆ. ಕೋಕಾಕೋಲಾ ವೇರ್ ಹೌಸ್ನಲ್ಲಿ ನಾಲ್ವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾತ್ರಿ ಶೆಡ್ ಕಿಟಕಿ ಬಾಗಿಲು ಕ್ಲೋಸ್ ಮಾಡಿ ಅಡುಗೆ ಮಾಡಿದ್ದರು. ತಡರಾತ್ರಿ ಉಸಿರುಗಟ್ಟಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸದ್ಯ ಈ ಪ್ರಕರಣದ ಕುರಿತು ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಸರ್ಕಾರಿ ಬಸ್ಗಳಲ್ಲಿ ತಂಬಾಕು ಜಾಹೀರಾತು ನಿಷೇಧ | ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ



















