ಹಾವೇರಿ : ಹಾವೇರಿಯ ಹಾನಗಲ್‌ನ ನಾಲ್ಕರ್ ಕ್ರಾಸ್ ಬಳಿ ಭೀಕರವಾದ ರಸ್ತೆ ಅಪಘಾತ ನಡೆದಿದ್ದು, ಬೈಕ್ ಸವಾರನಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗಂಗಾಧರ ದೊಡ್ಡಜಾಡರ (28)ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಹಾನಗಲ್ ನ ಅಕ್ಕಿ ಆಲೂರು ಗ್ರಾಮದ ನಿವಾಸಿ ಈತನಾಗಿದ್ದಾನೆ. ಈ ರಸ್ತೆ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಂಗಾಧರನು ಹಾನಗಲ್ -ಶಿರಸಿ ಮಾರ್ಗದಲ್ಲಿ ರೋಡ್ ಕ್ರಾಸ್ ಮಾಡಿತ್ತಿದ್ದನು. ಆ ವೇಳೆ ಹಾನಗಲ್ -ಆನವಟ್ಟಿ ಮಾರ್ಗವಾಗಿ ತೆರಳ್ತಿದ್ದ ಕಾರು ಬಂದು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯ ರಭಸಕ್ಕೆ ರಸ್ತೆಯಲ್ಲಿ ಬೈಕ್ ಸವಾರ ಎಸೆಯಲ್ಪಟ್ಟಿದ್ದಾನೆ. ಸದ್ಯ ಈ ಪ್ರಕರಣವು ಹಾನಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಇತಿಹಾಸ ಹೊಸ್ತಿಲಲ್ಲಿ ಮಂಧಾನ, ದೀಪ್ತಿ : ಶ್ರೀಲಂಕಾ ಟಿ20 ಸರಣಿಯಲ್ಲಿ ಬೃಹತ್ ದಾಖಲೆಗಳ ನಿರೀಕ್ಷೆ



















