ಆನೇಕಲ್ : ಹೊಸೂರು ಸಮೀಪದ ಪೆರಂಡಪಲ್ಲಿಯ ಬೆಂಗಳೂರು–ಚೆನೈ ಹೈವೇಯಲ್ಲಿ ಲಾರಿ ಹಾಗೂ ನಾಲ್ಕು ಕಾರುಗಳ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಿಂದ ಸಂಪೂರ್ಣವಾಗಿ ಕಾರುಗಳು ನಜ್ಜುಗುಜ್ಜಾಗಿವೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಪಘಾತ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕ್ರೇನ್ ಮೂಲಕ ಕಾರುಗಳನ್ನ ರಸ್ತೆಯಿಂದ ತೆರವು ಮಾಡಿದ್ದಾರೆ. ಗಾಯಾಳುಗಳನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ‘ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ.. ನೇರ ಹೋರಾಟಗಾರ’ | ಡಿಕೆ ಶಿವಕುಮಾರ್



















