ರೋಮ್ : ಇಟಲಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಉದ್ಯಮಿ ಮತ್ತು ಆತನ ಪತ್ನಿ ಬಲಿಯಾಗಿದ್ದಾರೆ.
ಜಾವೇದ್ ಅಖ್ತರ್ (55) ಮತ್ತು ಅವರ ಪತ್ನಿ ನಾಡಿರಾ ಗುಲ್ಶನ್ (47) ಮೃತ ದಂಪತಿ.
ಇವರು ತಮ್ಮ ಮೂವರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಗ್ರೊಸೆಟೊ ಬಳಿಯ ಔರೆಲಿಯಾ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಏಷ್ಯನ್ ಮೂಲದ ಪ್ರವಾಸಿಗರನ್ನು ಹೊತ್ತ ವ್ಯಾನ್ ಮತ್ತು ಮಿನಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಮೂವರು ಜನರಲ್ಲಿ ನಾಗ್ಪುರ ದಂಪತಿಗಳು ಸೇರಿದ್ದಾರೆ.
ಈ ದಂಪತಿಯ ಮಗಳು ಅರ್ಜೂ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದಾಳೆ. ಆಕೆಯನ್ನು ಸಿಯೆನಾದ ಲೀ ಸ್ಕಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಇನ್ನಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಇಟಲಿಯ ಭಾರತೀಯ ರಾಯಭಾರ ಕಚೇರಿ ನಾಗ್ಪುರ ದಂಪತಿ ಸಾವಿಗೆ ಸಂತಾಪ ಸೂಚಿಸಿದೆ. ಅವರ ಕುಟುಂಬಕ್ಕೆ ಅಗತ್ಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ.



















