ಶಿವಮೊಗ್ಗ : ತಾಲೂಕಿನ ಕುಂಸಿ ಹತ್ತಿರ ಭೀಕರ ಅಪಘಾತವೊಂದು ನಡೆದಿದೆ.
ಅಡ್ಡಬಂದ ನಾಯಿ ತಪ್ಪಿಸಲು ಹೋಗಿ, ಮರಕ್ಕೆ ಟಿಟಿ ವಾಹನ ಡಿಕ್ಕಿಯಾಗಿದೆ. ಬೆಂಗಳೂರು- ಹೊನ್ನಾವರ ಎನ್.ಹೆಚ್-206 ರಲ್ಲಿ ಈ ಘಟನೆ ನಡೆದಿದೆ. ಕುಂಸಿ – ಚಿಕ್ಕದಾವನಂದಿ ಗ್ರಾಮದ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ ನಾಯಿ ಅಡ್ಡ ಬಂದಿದ್ದಕ್ಕೆ ಅದನ್ನು ತಪ್ಪಿಸಲು ಹೋಗಿ ಟಿಟಿ ನಿಯಂತ್ರಣ ತಪ್ಪಿದೆ. ಅಪಘಾತದ ರಭಸಕ್ಕೆ ಟಿಟಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಟಿಟಿಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಟಿ ವಾಹನ ಬೆಂಗಳೂರಿನ ದೇವನಹಳ್ಳಿಯಿಂದ ಸಿಗಂದೂರಿಗೆ ತೆರಳುತ್ತಿತ್ತು ಎನ್ನಲಾಗಿದೆ. ಆಷಾಡ ಶುಕ್ರವಾರ ಪೂಜೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.