ಬೆಂಗಳೂರು: ಈಗ ಅಂಗೈಯಲ್ಲಿ ಆಕಾಶ ಎನ್ನುವಂತಾಗಿದೆ. ಏನೇ ಬೇಕಾದರೂ ಮೊಬೈಲ್ ನಿಂದ ಮನೆಗೆ ತರಿಸಿಕೊಳ್ಳಬಹುದು. ಈ ಸಾಲಿಗೆ ಈಗ ಹಾಪ್ ಕಾಮ್ಸ್ ಕೂಡ ಬಂದು ನಿಂತಿದೆ. ಹಾಪ್ ಕಾಮ್ಸ್, ತರಕಾರಿ, ಹಣ್ಣುಗಳನ್ನು ಮನೆ ಬಾಗಿಲಿಗೆ ತಲುಪಿಸಲು ಹಾಪ್ ಕಾಮ್ಸ್ ಮುಂದಾಗಿದೆ.
ಸೂಪರ್ ಮಾರುಕಟ್ಟೆಗಳಿಗೆ ಪೈಪೋಟಿ ನೀಡುವುದಕ್ಕೆ ಹಾಪ್ ಕಾಮ್ಸ್ (hop coms) ಈ ನಿರ್ಧಾರ ಕೈಗೊಂಡಿದೆ. ನಗರದ ಬಹುತೇಕ ಕಡೆ ಸೂಪರ್ ಮಾರುಕಟ್ಟೆಗಳನ್ನು ನಿರ್ಮಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹಾಪ್ ಕಾಮ್ಸ್ ಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹೊಡೆತ ತಪ್ಪಿಸುವ ನಿಟ್ಟಿನಲ್ಲಿ ತಾಜಾ ತರಕಾರಿ, ಹಣ್ಣುಗಳನ್ನು ತಲುಪಿಸಲು ನಿರ್ಧರಿಸಲಾಗಿದೆ. ಈ ವಿನೂತನ ಕಾರ್ಯಕ್ಕೆ ಹಾಪ್ ಕಾಮ್ಸ್ ಮುಂದಾಗಿದೆ. ಅಪಾರ್ಟ್ಮೆಂಟ್ ಗಳಲ್ಲೇ ಸಂಚಾರ ಮಾರಾಟ ಮಳಿಗೆ ತೆರೆಯಲು ಹಾಪ್ ಕಾಮ್ಸ್ ನಿರ್ಧರಿಸಿದೆ. ಪ್ರಾಯೋಗಿಕವಾಗಿ ನಗರದ 60 ಅಪಾರ್ಟ್ಮೆಂಟ್ ಗಳಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಮುಂದೆ ಜನರ ಪ್ರತಿಕ್ರಿಯೆ ನೋಡಿಕೊಂಡು ವಿಸ್ತರಿಸಲು ನಿರ್ಧರಿಸಲಾಗಿದೆ.
ಹಾಪ್ ಕಾಮ್ಸ್ ನ ಆದಾಯ ಹೆಚ್ಚಳ, ಸೂಪರ್ ಮಾರುಕಟ್ಟೆಗಳಿಗೆ ಪೈಪೋಟಿ ಹಾಗೂ ಉತ್ತಮ ತರಕಾರಿ, ಹಣ್ಣು ಜನರಿಗೆ ಸಿಗುವಂತೆ ಮಾಡುವುದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ನ ಸಹಭಾಗಿತ್ವದಲ್ಲಿ ಹಾಪ್ ಕಾಮ್ಸ್ ಈ ನಿರ್ಧಾರ ಕೈಗೊಂಡಿದೆ ಎಂದು ಹಾಪ್ ಕಾಮ್ಸ್ ನಿರ್ದೇಶಕ ಮಿರ್ಜಿ ಉಮೇಶ್ ಶಂಕರ್ (Mirji Umesh Shankar) ಹೇಳಿದ್ದಾರೆ.