ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಇಂದಿನಿಂದ ಆರಂಭವಾಗಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದು, ಅತ್ಯಂತ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಗೆಲುವಿನ ಶುಭಾರಂಭ ಪಡೆದುಕೊಂಡಿದೆ.
ಭಾರತ ನೀಡಿದ 87 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ತಂಡವು ಕೇವಲ 3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿತು, ಆದರೆ ಈ ಹಂತದಲ್ಲಿ ಭಾರೀ ಮಳೆ ಬಂದ ಕಾರಣ ಆಟವನ್ನು ನಿಲ್ಲಿಸಬೇಕಾಯಿತು.
ಮಳೆ ನಿಲ್ಲದ ಕಾರಣ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಡಕ್‌ವರ್ತ್-ಲೂಯಿಸ್ ವಿಧಾನವನ್ನು ಬಳಸಿಕೊಂಡು ಫಲಿತಾಂಶವನ್ನು ನಿರ್ಧರಿಸಲಾಯಿತು. ಈ ವಿಧಾನದ ಪ್ರಕಾರ, ಪಾಕಿಸ್ತಾನವು ಭಾರತಕ್ಕಿಂತ 2 ರನ್‌ಗಳ ಹಿಂದಿದ್ದ ಕಾರಣ ಪಂದ್ಯದಲ್ಲಿ ಸೋತಿತು.
ಇದನ್ನೂ ಓದಿ : ತಮಿಳು ನಟ ಅರುಣ್ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ!



















