ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ (Honeytrap case) ಪ್ರಕರಣ ದೊಡ್ಡ ಸದ್ದು ಮಾಡುತ್ತಿದ್ದು, ಈ ವಿಚಾರವಾಗಿ ಸಚಿವ ರಾಜಣ್ಣ ಪುತ್ರ, ಎಂಎಲ್‍ಸಿ ರಾಜೇಂದ್ರ (Rajendra Rajanna) ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಘಟನೆಯ ಕುರಿತು ವಿವರಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಡಿಜಿಗೆ ದೂರು ಕೊಡಲು ಸೂಚಿಸಿದ್ದಾರೆ ಎನ್ನಲಾಗಿದೆ.
ವಕೀಲರ ಜೊತೆ ಸಮಾಲೋಚನೆ ನಡೆಸಿ ಒಂದೆರಡು ದಿನದಲ್ಲಿ ದೂರು ಕೊಡುತ್ತೇನೆ. ಹನಿಟ್ರ್ಯಾಪ್ ಹಿಂದೆ ತುಂಬಾ ದೊಡ್ಡ ವ್ಯಕ್ತಿಗಳು ಇದ್ದಾರೆ ಅಂತ ರಾಜೇಂದ್ರ ಪುನರುಚ್ಛರಿಸಿದ್ದಾರೆ ಎನ್ನಲಾಗಿದೆ. ಹನಿಟ್ರ್ಯಾಪ್ ಪ್ರಕರಣದ ವಿಚಾರವಾಗಿ ಘರ್ಜಿಸುವ ಹುಲಿಗೆ ಸಿಡಿ ತೋರಿಸುವ ಕೆಲಸ ಆಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಡಿಕೆಶಿಯ ಹಲೋ ವ್ಯಂಗ್ಯಕ್ಕೆ ಅಷ್ಟೇ ವ್ಯಂಗ್ಯವಾಗಿ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಹನಿಟ್ರ್ಯಾಪ್ ಆರೋಪ ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ, ಮುಂದೆನೂ ಬರಬಹುದು. ನನಗೆ ಹಿನ್ನೆಡೆ ಆಗಲ್ಲ. ನಾನೇನೂ ಕಳ್ಳತನ ಮಾಡಿಲ್ಲ. ಎರಡ್ಮೂರು ದಿನದಲ್ಲಿ ದೂರು ನೀಡುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ.
ರಾಜಣ್ಣ (K.N Rajanna) ಅಗ್ರೆಸ್ಸಿವ್ ಧೋರಣೆ ಕಡಿಮೆ ಆಗಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದು, ನಾನು ಎಲ್ರಿಗೂ ಹಲೋ ಅಂತೇನೆ ಎಂದು ಡಿಸಿಎಂಗೆ ಟಾಂಗ್ ಕೊಟ್ಟಿದ್ದಾರೆ.