ಮೈಸೂರು : ಯಕ್ಷಗಾನದ ಒಳಗೆ ಎಷ್ಟೋ ಬಾರಿ ಸಲಿಂಗಕಾಮ ನಡೆಯುತ್ತದೆ. ಸ್ತ್ರೀ ವೇಷಧಾರಿಗಳಿಗೆ ಹೆಚ್ಚು ಒತ್ತಡವಿರುತ್ತದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಸತ್ಯವನ್ನು ಹೇಳಲು ಹಿಂಜರಿಯಬಾರದು. ಕಲಾವಿದರು 6-8 ತಿಂಗಳು ತಿರುಗಾಟದಲ್ಲೇ ಇರ್ತಾರೆ, ಯಕ್ಷಗಾನ ಕಲಾವಿದರಿಗೆ ಯಾರೂ ಹೆಣ್ಣು ಕೊಡ್ತಿರಲಿಲ್ಲ, ಅಲ್ಲಿನ ಸ್ತ್ರೀ ವೇಷಧಾರಿಗಳ ಮೇಲೆ ಇತರರಿಗೆ ಮೋಹ ಇರುತ್ತಿತ್ತು ಎಂದಿದ್ದಾರೆ.
ಸ್ತ್ರೀವೇಷದ ಕಲಾವಿದ ಸಲಿಂಗಕಾಮ ನಿರಾಕರಿಸಿದರೆ, ಭಾಗವತರು ಮರುದಿನ ಪದ್ಯವನ್ನೇ ಕೊಡ್ತಿರಲಿಲ್ಲ. ರಂಗಭೂಮಿ ಮೇಲೆ ಸೇಡು ತೀರಿಸಿಕೊಳ್ಳಲಾಗ್ತಿತ್ತು ಎಂದು ಪುರುಷೋತ್ತಮ ಅವರು ವಿವಾದಾತ್ಮಕ ಹೇಳಿಕೆ ನೀಡಿರುವ ಆಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಇನ್ನೂ ಮುಗಿಯದ ಕೊತ್ತಲವಾಡಿ ಸಿನಿಮಾ ಜಟಾಪಟಿ | PRO ಹರೀಶ್ ಅರಸು ಸೇರಿ ಐವರ ವಿರುದ್ಧ ಯಶ್ ತಾಯಿ ಕಂಪ್ಲೇಟ್



















