ಬೆಂಗಳೂರು : ಹೆಚ್.ಎಸ್.ಆರ್.ಲೇಔಟ್‌ನಲ್ಲಿನ ಶಾಖಾ ಮಠದಲ್ಲಿ ಗೃಹ ಸಚಿವರ ಪತ್ನಿ ಕನ್ನಿಕಾ ಪರಮೇಶ್ವರ್ ಶತಚಂಡಿಕಾಯಾಗದಲ್ಲಿ ಭಾಗಿಯಾಗಿದ್ದಾರೆ.
ಶ್ರೀಕ್ಷೇತ್ರ ಕಾರ್ತಿಕೇಯ ಪೀಠದಲ್ಲಿ ಯಾಗ ನಡೆಸಿದ್ದು, ಯೋಗೇಂದ್ರ ಶ್ರೀಗಳ ನೇತೃತ್ವದಲ್ಲಿ ಚಂಡಿಕಾ ಯಾಗ ನಡೆದಿದೆ. ಪತಿಗೆ ಉನ್ನತ ಸ್ಥಾನ ಸಿಗಲೆಂದು ಸಂಕಲ್ಪ ಮಾಡಿ ಶತಚಂಡಿಕಾಯಾಗ ಮಾಡಿಸಿದ್ದಾರೆ.
ಶಿವಮೊಗ್ಗದ ಹೊಸನಗರದ ಕಾರ್ತಿಕೇಯ ಪೀಠದ ಹೆಚ್.ಎಸ್.ಆರ್.ಲೇಔಟ್‌ನಲ್ಲಿ ಇರುವ ಶಾಖಾ ಮಠದಲ್ಲಿ ಅವರು ಶತ ಚಂಡಿಕಾಯಾಗ ಮಾಡಿಸಿದ್ದಾರೆ.



















