ವಿಂಗ್ ಕಮಾಂಡರ್ ಶೀಲಾದಿತ್ಯ ಹೇಳಿಕೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ,.
ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಡಾ. ಜಿ. ಪರಮೇಶ್ವರ್ ಅಸಮಾಧಾನ ಹೊರ ಹಾಕಿದ್ದಾರೆ. ರಸ್ತೆ ಜಗಳವನ್ನು ಭಾಷಾ ಸಂಘರ್ಷವೆಂದು ಬಿಂಬಿಸಲಾಗಿದೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಾಹನ ಚಾಲನೆ ವೇಳೆ ನಡೆದ ಜಗಳಕ್ಕೆ ಭಾಷಾ ಸಂಘರ್ಷ ಎಂದು ಬಿಂಬಿಸಲಾಗಿದೆ. ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಯತ್ನ ನಿಜಕ್ಕೂ ನಾಚಿಕೆಗೇಡು. ಸಣ್ಣ ವಿಚಾರಕ್ಕೆ ಬೈಕ್ ಸವಾರ ಕನ್ನಡಿಗ ವಿಕಾಸ್ ಕುಮಾರ್ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಅಪಪ್ರಚಾರ ಮಾಡಿರುವುದು ಕಿಡಿಗೇಡಿತನ.
ಕನ್ನಡಿಗರು ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿರುವ ವಿಶಾಲ ಹೃದಯದ, ಸುಸಂಸ್ಕೃತರು.
ಭಾಷೆ ವಿಚಾರಕ್ಕೆ ಜಗಳಕ್ಕೆ ಇಳಿಯುವಷ್ಟು ಸಣ್ಣ ಗುಣದವರಲ್ಲ. ಕೆಲ ರಾಷ್ಟ್ರೀಯ ಸುದ್ದಿ ವಾಹಿನಿಗಳು ಘಟನೆಯ ಸತ್ಯಾಸತ್ಯತೆ ಅರಿತಿಲ್ಲ. ಒಂದೇ ದೃಷ್ಟಿಕೋನದಲ್ಲಿ ವರದಿ ಮಾಡಿರುವುದು ನನ್ನನ್ನು ಒಳಗೊಂಡಂತೆ ಕನ್ನಡಿಗರಿಗೆ ಬೇಸರ ತರಿಸಿದೆ. ಘಟನೆಗೆ ಸಂಬಂಧಿಸಿದಂತೆ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬಾತನ ವಿರುದ್ಧವೂ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.



















