ಕನ್ನಡದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ‘ಹೊಂಬಾಳೆ’ ದೇಶಾದ್ಯಂತ ಫೇಮಸ್ ಆಗಿದೆ. ಸಿನಿಮಾ ಜೊತೆಗೆ ಈಗ ಹೊಂಬಾಳೆ ಹೊಸ ಹೆಜ್ಜೆ ಇಡಲಿದೆ ಎನ್ನುವ ಸುದ್ದಿ ಭಾರೀ ಜೋರಾಗಿ ಕೇಳಿ ಬರುತ್ತಿದೆ. ಕೋಟ್ಯಾಂತರ ಅಭಿಮಾನಿಗಳಿರುವ RCB ಖರೀದಿಗೆ ‘ಹೊಂಬಾಳೆ’ ಸಂಸ್ಥೆ ಪ್ಲಾನ್ ಮಾಡುತ್ತಿದೆ ಎನ್ನುವ ಚರ್ಚೆ ಶುರುವಾಗಿದೆ.
RCB ಫ್ರಾಂಚೈಸಿಯನ್ನು ಈಗಾಗಲೇ ಮಾರಾಟಕ್ಕೆ ಇಡಲಾಗಿದ್ದು, ಹೊಂಬಾಳೆ ಮಾಲೀಕ ವಿಜಯ್ ಕಿರಂಗದೂರು RCB ಖರೀದಿ ರೇಸ್‌ಗೆ ಇಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. RCB ಫ್ರಾಂಚೈಸಿ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಹೊಂಬಾಳೆ ಫಿಲ್ಮ್ಸ್ KGF ಸಮಯದಿಂದ RCB ಸ್ಪಾನ್ಸರ್ ಆಗಿದೆ. ಅಂದು ಕೊಂಡಂತೆ ಆದರೆ ಹೊಂಬಾಳೆ ಫಿಲಂಸ್ RCB ಖರೀದಿಸೋ ಸಾಧ್ಯತೆ ಇದೆ ಎನ್ನಲಾಗಿದೆ.
RCB ಫ್ರಾಂಚೈಸಿ ಸದ್ಯದ ಮಾರುಕಟ್ಟೆಯಲ್ಲಿ ಬರೊಬ್ಬರಿ 2 ಬಿಲಿಯನ್ ಮೌಲ್ಯ ಹೊಂದಿರುವ RCB ತಂಡವನ್ನು ಮಾರಾಟ ಮಾಡಲು ನಿರ್ಧರಿಸಿದೆ. ಆರ್ಸಿಬಿಯನ್ನ ಕೊಂಡುಕೊಂಡಿದ್ದ ವಿಜಯ್ ಮಲ್ಯ ಮಾಲೀಕತ್ವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಈಗ ಹೊರಬರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹೊಸ ಮಾಲೀಕರ ಹುಡುಕಾಟ ಶುರುವಾಗಿದೆ. ಇದರ ಖರೀದಿ ವಿಚಾರದಲ್ಲಿ ಹೊಂಬಾಳೆ ಫಿಲಂಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಇನ್ನು ಶಿವಮೊಗ್ಗ ಮೂಲದ ಉದ್ಯಮಿ ನಿಖಿಲ್ ಕಾಮತ್, ಮಣಿಪಾಲ್ ಗ್ರೂಪ್‌ನ ರಂಜನ್ ರೈ ಅವರ ಹೆಸರುಗಳೂ ಸಹ ಸ್ಪರ್ಧೆಯಲ್ಲಿವೆ.
RCB ಮಾಲೀಕರು ಯಾರು, ಮೌಲ್ಯ ಎಷ್ಟು?
RCB ತಂಡದ ಮಾಲೀಕರು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL) USL ಅನ್ನು Diageo Plc ಬ್ರಿಟಿಷ್ ಮದ್ಯ ಕಂಪನಿ. RCB ತಂಡದ ಅಂದಾಜು ಮೌಲ್ಯ — USD 269 ಮಿಲಿಯನ್. ಆದರೆ ಮಾಲೀಕರು ಮಾರಾಟ ಮಾಡಲು ಸುಮಾರು USD 2 ಬಿಲಿಯನ್ ಅಂದಾಜು ₹16,500 ಕೋಟಿ ಗೂ ಹೆಚ್ಚು ನಿಗದಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಘೋರ ದುರಂತ | ರಾತ್ರಿ ಮಲಗಿದ್ದಲ್ಲೇ ಕಣ್ಮುಚ್ಚಿದ ಮೂವರು ಯುವಕರು.. ಆಗಿದ್ದೇನು?



















