ಕರ್ನಾಟಕದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಬಾಲಿವುಡ್ ನ ಸೂಪರ್ ಸ್ಟಾರ್ ಹೃತಿಕ್ ರೋಷನ್ ಜೊತೆ ಮುಂದಿನ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ. ಈ ಬಗ್ಗೆ ಖುದ್ದು ಹೊಂಬಾಳೆ ಸಂಸ್ಥೆ ಹೆಮ್ಮೆಯಿಂದ ತಮ್ಮ ಹೊಸ ಸಿನಿಮಾ ನಿರ್ಮಾಣದ ವಿಚಾರವನ್ನು ಹಂಚಿಕೊಂಡಿದೆ.

ಭಾರತೀಯ ಚಿತ್ರರಂಗದ ಪ್ರಮುಖ ನಟ ಹೃತಿಕ್ ರೋಷನ್ ಅವರೊಂದಿಗೆ ನಮ್ಮ ಹೊಂಬಾಳೆ ತಂಡದ ಹೊಸ ಚಿತ್ರದ ಬಗ್ಗೆ ಘೋಷಿಸಲು ಸಂತಸ ಹಾಗೂ ಹೆಮ್ಮೆಯಾಗುತ್ತಿದೆ. ಇದು ಕರ್ನಾಟಕದ ಮಣ್ಣಿಂದ ಜಾಗತಿಕ ರಂಗದೆಡೆಗೆ ಸಾಗುವ ನಮ್ಮ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ಹೊಸ ಚಿತ್ರ ನಮ್ಮ ಹೊಸ ಶೈಲಿಯ ಕಥಾ ನಿರೂಪಣೆ ಮತ್ತು ಹೃತಿಕ್ ರೋಷನ್ ಅವರ ಅಪ್ರತಿಮ ಅಭಿನಯಕ್ಕೆ ಸಾಕ್ಷಿಯಾಗಲಿದೆ ಎಂದಿದೆ. ಸಂಪೂರ್ಣ ಆಕ್ಷನ್ ಕತೆ ಹೊಂದಿರೋ ಸಿನಿಮಾದ ಪೂರ್ವ ತಯಾರಿ ಈಗಾಗಲೇ ಆರಂಭವಾಗಿದೆ. ಆದ್ರೆ ಈ ಚಿತ್ರದ ನಿರ್ದೇಶಕರ್ಯಾರು, ತಾರಾಬಳಗಳಲ್ಲಿ ಯಾರೆಲ್ಲಾ ಇರಲಿದ್ದಾರೆ ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಆದ್ರೆ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯೊಂದು ಬಾಲಿವುಡ್ ನ ಸೂಪರ್ ಹೀರೋ ನನ್ನು ನಟನಾಗಿಸಿ ಚಿತ್ರ ನಿರ್ಮಿಸ್ತಿರೋದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ.