ಸಿಲಿಕಾನ್ ಸಿಟಿಯಲ್ಲಿನ ಗುಂಡಿಗಳ ಅವಾಂತರ ಕೇವಲ ರಾಜ್ಯವಷ್ಟೇ ಅಲ್ಲ, ಹಾಲಿವುಡ್ ಅಂಗಳದಲ್ಲೂ ಸದ್ದು ಮಾಡುತ್ತಿದೆ.
ಹೌದು! ಹಾಲಿವುಡ್ ನಟನ ಫೋಟೋ ಬಳಿಸಿ, ಬೆಂಗಳೂರಿಗರು ಗುಂಡಿ ಮುಚ್ಚುವಂತೆ ಮನವಿ ಮಾಡುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಗುಂಡಿಗಳು ಪ್ರತಿ ವರ್ಷ ಕೆಲವರನ್ನು ಬಲಿ ಪಡೆದು, ಹಲವರನ್ನು ಗಂಭೀರವಾಗಿ ಗಾಯಗೊಳಿಸುತ್ತಿವೆ. ಮಳೆಗಾಲಕ್ಕೂ ಮುನ್ನ, ಮಳೆಗಾಲದ ನಂತರ ಜನರು ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಕೈ ಮುಗಿದು ಮನವಿ ಮಾಡಿದರೂ ಗುಂಡಿಗಳು ಮಾತ್ರ ಮುಕ್ತಿ ಕಾಣುತ್ತಿಲ್ಲ. ಹೀಗಾಗಿಯೇ ಬೆಂಗಳೂರಿಗರು ವಿನೂನತ ಹೋರಾಟಕ್ಕೆ ಕೈ ಹಾಕುತ್ತಿದ್ದಾರೆ.

ಬೆಂಗಳೂರಿನ ಗುಂಡಿಗಳನ್ನು ಮುಚ್ಚುವಂತೆ ಜನರು ಕೂಡ ಭಿನ್ನ-ವಿಭಿನ್ನ ಹೋರಾಟಗಳನ್ನು ಮಾಡುತ್ತಲೇ ಇದ್ದಾರೆ. ಆದರೂ ಗುಂಡಿಗಳಿಂದ ಮಾತ್ರ ಮುಕ್ತಿ ಸಿಗುತ್ತಿಲ್ಲ. ಇತ್ತೀಚೆಗಷ್ಟೇ ಗುಂಡಿಗಳ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಕೂಡ ಗಮನ ಸೆಳೆಯಲಾಗಿತ್ತು. ಈಗ Tom cruise ಫೋಟೋ ಬಳಕೆ ಮಾಡಿ ಜನರು ಗುಂಡಿ ಮುಚ್ಚುವಂತೆ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬಿಬಿಎಂಪಿ ಕಮಿಷನರ್ ಗೆ ಟ್ಯಾಗ್ ಮಾಡಿ tom cruise ಫೋಟೊ ಸಮೇತ ಪೋಸ್ಟ್ ಮಾಡಿದ್ದಾರೆ. ಬಿಬಿಎಂಪಿ ಕಮಿಷನರ್ ಗುಂಡಿ ಮುಚ್ಚರಪ್ಪ ಅಂತ ಪೋಸ್ಟ್ ನಲ್ಲಿ ಬರೆದಿದ್ದಾರೆ. ಈ ಫೋಟೋ ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.