ಬೆಂಗಳೂರು: ಕರ್ನಾಟಕದ ಬೆಳಗಾವಿಯಲ್ಲಿ ಉದ್ಯೋಗ ಪಡೆಯಬೇಕು, ಕೈತುಂಬ ಸಂಬಳ ಪಡೆಯಬೇಕು ಎಂದು ಬಯಸುವವರಿಗೆ ಗುಡ್ ನ್ಯೂಸ್ ಇದೆ. ಎಚ್ ಎಲ್ ಎಲ್ ಲೈಫ್ ಲಿಮಿಟೆಡ್ ಕಂಪನಿಯಲ್ಲಿ (HLL Lifecare Recruitment 2025) ಖಾಲಿ ಇರುವ ಸೇಫ್ಟಿ ಆಫೀಸರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಒಂದು ಹುದ್ದೆಯ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ಕುರಿತು ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: HLL Lifecare ಲಿಮಿಟೆಡ್
ಒಟ್ಟು ಹುದ್ದೆಗಳು: 01
ಅರ್ಜಿ ಸಲ್ಲಿಕೆ ಮಾದರಿ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 17
ಉದ್ಯೋಗದ ಸ್ಥಳ: ಬೆಳಗಾವಿ
ವಿದ್ಯಾರ್ಹತೆ ಏನು?
ಮಾನ್ಯತೆ ಪಡೆದ ವಿವಿ ಅಥವಾ ಮಂಡಳಿಗಳಲ್ಲಿ ಡಿಪ್ಲೊಮಾ, ಬಿಎಸ್ಸಿ, ಬಿಇ ಅಥವಾ ಬಿಟೆಕ್ ಕೋರ್ಸ್ ಗಳನ್ನು ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರ ಗರಿಷ್ಠ ವಯಸ್ಸು 35 ವರ್ಷ ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ. ನೇಮಕಾತಿ ಹೊಂದಿದವರಿಗೆ ಮಾಸಿಕ 40 ಸಾವಿರ ರೂಪಾಯಿ ಸಂಬಳ ನೀಡಲಾಗುತ್ತದೆ. ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ಸೈಟ್ lifecarehll.comಗೆ ಭೇಟಿ ನೀಡಬೇಕು
ಸೇಫ್ಟಿ ಆಫೀಸರ್ ಹುದ್ದೆಯ ವಿಭಾಗವನ್ನು ಆಯ್ಕೆಮಾಡಿಕೊಳ್ಳಬೇಕು
ಹುದ್ದೆಗಳ ಕುರಿತ ಅಧಿಸೂಚನೆ ಓದಬೇಕು
ಅರ್ಜಿ ಡೌನ್ ಲೋಡ್ ಮಾಡಿಕೊಳ್ಳಬೇಕು
ಅರ್ಜಿ ನಮೂನೆಯನ್ನು ತಪ್ಪಿಲ್ಲದೆ ಭರ್ತಿ ಮಾಡಬೇಕು
ಅರ್ಜಿಯ ನಮೂನೆ ಜತೆಗೆ ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು
ಇ-ಮೇಲ್- recruiter@lifecarehll.com