ಚಿತ್ರದುರ್ಗ : ಚಿತ್ರದುರ್ಗದ ಗೊರ್ಲೊತ್ತು ಕ್ರಾಸ್ ಬಳಿ ಕ್ರಿಸ್‌ಮಸ್ ದಿನದಂದು ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿದೆ. ಒಟ್ಟು 6 ಮಂದಿ ಸಾವು ಕಂಡಿದ್ದರು. ಬಸ್‌ನಲ್ಲಿದ್ದ ಐವರು ಹಾಗೂ ಕಂಟೇನರ್ ಚಾಲಕ ಕುಲದೀಪ್ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿದ್ದರು. ಈಗ ಸೀಬರ್ಡ್ ಬಸ್‌ನ ಚಾಲಕ ಮೊಹಮದ್ ರಫೀಕ್ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸೀಬರ್ಡ್ ಬಸ್‌ಗೆ ಕಂಟೇನರ್‌ಲಾರಿ ಗುದ್ದಿದ್ದರಿಂದ ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ದಾರುಣ ಸಾವು ಕಂಡಿದ್ದರು. ಆದರೆ, ಬಸ್‌ನ ಡ್ರೈವರ್ ಮೊಹಮದ್ ರಫೀಕ್ ಹಾಗೂ ಕ್ಲೀನರ್ ಸಾದಿಕ್ ಪಾರಾಗಿದ್ದರು. ಘಟನೆಯಲ್ಲಿ ಎರಡು ಕಾಲು ಹಾಗೂ ಒಂದು ಕೈ ಮುರಿದುಕೊಂಡಿದ್ದ ರಫೀಕ್‌ಗೆ ಹಿರಿಯೂರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಆದರೆ, ಕಿಮ್ಸ್ ಆಸ್ಪತ್ರೆಯಲ್ಲಿ ಆಪರೇಷನ್ ನಡೆಸುವ ವೇಳೆ ಚಿಕಿತ್ಸೆ ಫಲಿಸದೆ ರಫೀಕ್ ಶುಕ್ರವಾರ ಸಾವು ಕಂಡಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿಯೇ ಅವರಿಗೆ ಆಪರೇಷನ್ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಆಪರೇಷನ್ ವೇಳೆ ರಫೀಕ್ ದೇಹ ಚಿಕಿತ್ಸೆಗೆ ಸ್ಪಂದಿಸದೇ ಸಾವು ಕಂಡಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ | ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು!



















