ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಸಿ, ಸಿಟ್ಟಲ್ಲಿ ಮನೆ ಬಿಟ್ಟು ಹೋಗಿದ್ದ ಹುಡುಗ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದ ಹದಿನೇಳು ವರ್ಷದ ಪ್ರಥಮೇಶ್ ಮೃತ ದುರ್ದೈವಿ ಎನ್ನಲಾಗಿದೆ.

ನಿನ್ನೆ ಸಂಜೆ (ಅ.20) ಮನೆಯವರೊಂದಿಗೆ ಮೊಬೈಲ್ ಕೊಡಿಸದ ವಿಚಾರಕ್ಕೆ ಜಗಳ ಮಾಡಿಕೊಂಡು ಮುನಿಸಿಕೊಂಡು ಪ್ರಥಮೇಶ್ ಮನೆ ಬಿಟ್ಟು ಹೋಗಿದ್ದ. ನಂತರದಲ್ಲಿ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತಾದರೂ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗಿನ ಹುಡುಕಾಟದಲ್ಲಿ ಆತ ಓದುತ್ತಿದ್ದ ಸರ್ಕಾರಿ ಕಾಲೇಜಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ಇದು ಸ್ವಯಂಕೃತ ಅಪರಾಧದಿಂದಾದ ಆತ್ಮಹತ್ಯೆ ಎಂದು ಕಾಣಿಸುತ್ತಿದ್ದು, ಬಾಳಿ ಬದುಕಬೇಕಿದ್ದ ಹುಡುಗ ತನ್ನ ಕೋಪದ ಕೈಗೆ ಬುದ್ದಿಕೊಟ್ಟು ಬದುಕನ್ನೇ ಕೊನೆಯಾಗಿಸಿಕೊಂಡಿದ್ದಾನೆ.