ಮಂಗಳೂರು: ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ತಲ್ವಾರ್ ತೋರಿಸಿದರೆ ಸಾಕಿತ್ತು. ಕಥೆಯೇ ಬೇರೆಯಾಗುತ್ತಿತ್ತು ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಜೇಶ್ವರದ ವರ್ಕಾಡಿಯಲ್ಲಿ ಮಾತನಾಡಿದ ಅವರು, ಪಹಲ್ಗಮ್ ನಲ್ಲಿ ಉಗ್ರರಿಗೆ ಹಿಂದೂಗಳು ಕೇವಲ ತಲ್ವಾರ್ ತೋರಿಸಿದ್ದರೆ ಕಥೆಯೇ ಬೇರೆಯಾಗಿರುತ್ತಿತ್ತು. ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಪೌಡರ್, ಬಾಚಣಿಕೆ ಜೊತೆಗೆ ಚೂರಿ ಇಟ್ಟುಕೊಳ್ಳಿ. 6 ಇಂಚಿನ ಚೂರಿ ಇಟ್ಟುಕೊಳ್ಳಲು ಲೈಸೆನ್ಸ್ ಬೇಡ. ಸಂಜೆ ಮೇಲೆ ಓಡಾಡಿದ್ರೆ ನಿಮ್ಮ ಮೇಲೆ ಖಂಡಿತಾ ಅಕ್ರಮಣ ಮಾಡುತ್ತಾರೆ. ಆಕ್ರಮಣ ಮಾಡಬೇಡಿ ಎಂದು ಬೇಡಿಕೊಂಡ್ರೆ ನಿಮ್ಮ ಕಥೆ ಮುಗಿತು. ಅದರ ಬದಲು ಚೂರಿ ತೋರಿಸಿ ಸಾಕು, ಹೆದರಿ ಓಡುತ್ತಾರೆ.
ಹಿಂದೂ- ಮುಸ್ಲಿಂ ಗಲಾಟೆ ಅಂದರೆ ಮುಸ್ಲಿಂರು ಹೊಡಿಯುತ್ತಾರೆ. ಹಿಂದೂಗಳು ಓಡಿ ಹೋಗುತ್ತಾರೆ ಅಂತಾ ಇತ್ತು. ಆದರೆ, ಈಗ ಹಿಂದೂ ತಿರುಗಿ ಬಿದ್ದಿದ್ದಾನೆ. ಆದರೆ, ಇನ್ನೂ ಹೊಡೆಯಲು ಶುರು ಮಾಡಿಲ್ಲ. ನಾವು ಎದ್ದು ನಿಲ್ಲಬೇಕು. ಮನೆಯಲ್ಲಿ ಒಂದು ಒಂದು ತಲ್ವಾರ್ ಇಟ್ಟುಕೊಳ್ಳಿ ಎಂದು ಪ್ರಭಾಕರ್ ಭಟ್ ಕರೆ ನೀಡಿದ್ದಾರೆ.