ಬಾಗಲಕೋಟೆ: ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಯುವಕನೋರ್ವ ಹಿಂದೂ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ಮೆರವಣಿಗೆ (ganesh idol immersion) ವೇಳೆ ಯುವಕನೋರ್ವ ಹಸಿರು ಧ್ವಜ (green flag) ತಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಹಿಂದೂ (Hindu) ಯುವಕನಿಗೆ ಚಾಕುವಿನಿಂದ ಹಲ್ಲೆ ಹಲ್ಲೆ ಮಾಡಿದ್ದಾನೆ. (Bagalkot) ತಾಲ್ಲೂಕಿನ ಹೊಸಮುರನಾಳ ಗ್ರಾಮದಲ್ಲಿ (hosamuranala Village) ಈ ಘಟನೆ ನಡೆದಿದೆ.
ಆಸಿಪ್ ಬೆಳಗಾಂವಕರ್(21) ಮೆರವಣಿಗೆ ವೇಳೆ ಹಸಿರು ಧ್ವಜ ತಂದು ಗಲಾಟೆ ಮಾಡಿದ್ದಾನೆ. ಇದನ್ನು ಹಿಂದೂ ಯುವಕರು ವಿರೋಧಿಸಿದ್ದಾರೆ. ಆಗ ನವೀನ ಕೂಡ್ಲೆಪ್ಪನವರ(22) ಎನ್ನುವ ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ.
ಗಾಯಗೊಂಡಿರುವ ನವೀನ್, ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.