ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಪರಸ್ಪರ ಪ್ರೀತಿಸಿ (Love) ಮದುವೆಯಾಗಿರುವ ಘಟನೆ ನಡೆದಿದೆ.
ಪೋಷಕರ ವಿರೋಧದ ನಡುವೆಯೂ ಪೊಲೀಸ್ ಠಾಣೆಯಲ್ಲಿ ಈ ಜೋಡಿ ಒಂದಾಗಿದೆ. ಚಿಕ್ಕಬಳ್ಳಾಪುರ(Chikkaballapur) ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ 23 ವರ್ಷದ ಪಸೀಹಾ ತನ್ನ ಮನೆ ಎದುರಿನ ಹಿಂದೂ ಯುವಕ 24 ವರ್ಷದ ನಾಗಾರ್ಜುನನನ್ನು ಪ್ರೀತಿಸುತ್ತಿದ್ದಳು. ಈಗ ಇಬ್ಬರೂ ಧರ್ಮ ಬದಿಗಿಟ್ಟು ಮದುವೆಯಾಗಿದ್ದಾರೆ.
ಈ ಜೋಡಿ ಜೋಡಿ ಮನೆಬಿಟ್ಟು ಬಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊರೆ ಹೋಗಿದ್ದರು. ಕೊನೆಗೆ ಇಬ್ಬರ ಪೋಷಕರು ಆಗಮಿಸಿ, ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರೂ ಪಸೀಹಾ ಪ್ರೀತಿಸಿದವನ ಜೊತೆಯೇ ಬಾಳುವುದಾಗಿ ಹಠ ಹಿಡಿದು, ಮದುವೆಯಾಗಿದ್ದಾಳೆ.
ಈ ವೇಳೆ ದೊಡ್ಡ ಹೈಡ್ರಾಮಾವೇ ನಡೆದಿತ್ತು. ಈಗ ಈ ಜೋಡಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಅಲ್ಲದೇ, ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.