ಬೆಂಗಳೂರು: ಅನ್ಯ ರಾಜ್ಯದ ಯುವಕನೊಬ್ಬ ಹಿಂದೂ ದೇವರಿಗೆ ನಿಂದನೆ ಮಾಡಿರುವ ಘಟನೆ ಬೆಂಗಳೂರಿನ ವಡ್ಡರಪಾಳ್ಯದ ಬಳಿಯ ಇಚ್ಚಂಗೂರಲ್ಲಿ ನಡೆದಿದೆ.
ಅಲ್ಲಿ ನಿವಾಸಿಯಾಗಿರುವ ಉತ್ತರ ಭಾರತ ಮೂಲದ ಪ್ರದೀಪ್ ಕುಮಾರ್ ಪ್ರಜಾಪತಿ ಎಂಬ ಯುವಕ ಹಿಂದೂ ದೇವರ ಬಗ್ಗೆ ನಿಂದನೆ ಮಾಡಿರುವಂತಹ ವಿಡಿಯೋ ವೈರಲ್ ಆಗಿದೆ.
ಹಿಂದೂ ದೇವತೆಗಳಿಗೆ ಮನಗುಬಂದಂತೆ ನಿಂದಿಸಿದ್ದು, ಈತನ ನಿಂದನೆ ಕೇಳಿ ನೆಟ್ಟಿಗರು ಆಕ್ರೋಶಗೊಂಡು ಆತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ಆ್ಯಸಿಡ್ ಎರಚಿದ ಪತ್ನಿ!


















