ಧಾರವಾಡ : ಕರ್ನಾಟಕದಲ್ಲಿ 240 ಭಾಷೆಗಳಿವೆ. ನಾನು ತ್ರಿಭಾಷಾ ಸೂತ್ರವನ್ನು ವಿರೋಧಿಸುತ್ತೇನೆ. 2011 ರ ಜನಗಣತಿ ಪ್ರಕಾರ ದೆಹಲಿ 11 ಸಾವಿರ ಕನ್ನಡಿಗರು ಇದ್ದರು. ದ್ರಾವಿಡ ಭಾಷೆ ಬಿಟ್ಟು ಬೇರೆ ಭಾಷೆಗೆ ಹೋದರೆ 40 ಸಾವಿರ ಇದ್ದಾರೆ. 40 ಸಾವಿರ ಜನಗಳಿಗೋಸ್ಕರ 8 ಲಕ್ಷ ಮಕ್ಕಳಿಗೆ ಹಿಂದಿ ಕಲಿಸುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಹೇರಿಕೆ ಇದು ಅವೈಜ್ಞಾನಿಕವಾಗಿದೆ. ಬೇಕಾದವರು ಹಿಂದಿ ಕಲಿಯುತ್ತಾರೆ. ಆದರೆ ಅದನ್ನು ಕಲಿಯಲೇಬೇಕು ಎನ್ನುವುದು ಸರಿಯಲ್ಲ. ಕರ್ನಾಟಕದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಬಿಜೆಪಿ ರಾಷ್ಟ್ರೀಯ ಪಕ್ಷ, ಜೆಡಿಎಸ್ ಸ್ಥಳೀಯ ಪಕ್ಷಗಳಿವೆ. ರಾಷ್ಟ್ರೀಯ ಪಕ್ಷಗಳು ಹಿಂದಿ ಹೆರಿಕೆ ವಿರುದ್ಧ ನಿಲ್ಲುವುದು ಕಷ್ಟ. ಇವರಿಗೆಲ್ಲ ಹೈ ಕಮಾಂಡ್ ಇದೆ. ಅವರೆಲ್ಲ ಹಿಂದಿಯವರು, ಹಿಂದಿ ಬೇಡಾ ಅಂದ್ರೆ ಪಕ್ಷಗಳ ಮೇಲೆ ಪರಿಣಾಮ ಆಗುತ್ತದೆ. ನಮ್ಮಲ್ಲಿ ದ್ವಿಭಾಷಾ ಸಾಕೆಂದು ಹೇಳಬಹುದು. ಉತ್ತರ ಭಾರತದಲ್ಲಿ ಹೀಗೆ ಹೇಳಲಾಗುವುದಿಲ್ಲ ಎಂದಿದ್ದಾರೆ.
ಹೋರಾಟ ಮಾಡಿ ಕರ್ನಾಟಕ ಬಂದ್ ಮಾಡುತ್ತಾರೆ. ಬಂದ್ ಮಾಡಿ ನಷ್ಟ ಏಕೆ ಮಾಡುತ್ತಿರಿ? ಎಂದು ನಾನು ಹೇಳಿದ್ದೆ. ಭಾರತೀಯ ಭಾಷೆಗಳು ಇಂದು ಅತ್ಯಂತ ಇಕ್ಕಟ್ಟಿನಲ್ಲಿ ಇವೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಣ್ಣ ಭಾಷೆ ಸೇರಿ ಹಿಂದೆ ಭಾಷೆ ಬೆಳೆಯಿತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರದಲ್ಲಿ ಹಿಂದಿ ಇರಲಿ, ಇಂಗ್ಲಿಷ್ ಮಾತನಾಡಲಿ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.