ಇತ್ತೀಚಿನ ದಿನಗಳಲ್ಲಿ ಬೇರೆ ಭಾಷೆಗಳಿಗೆ ಒಲವು ತೋರುತ್ತ ನಮ್ಮ ಮಾತೃಭಾಷೆಯಾದ ಕನ್ನಡವನ್ನು ನಮ್ಮ ಯುವ ಪೀಳಿಗೆ ಕಡೆಗಣಿಸುತ್ತಿದೆ. ನಮ್ಮ ಭಾಷೆಯನ್ನು ಉಳಿಸುವ ಸಲುವಾಗಿ ಈಗಾಗಲೇ ಹಲವು ಕನ್ನಡಪರ ಸಂಘಟನೆಗಳು ಹೋರಾಟವನ್ನು ಕೂಡ ಮಾಡಿದೆ.
ನಮ್ಮ ಭಾಷೆ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಅದೇ ರೀತಿ ಇಲ್ಲೊಂದು ಕಡೆ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನಿಗೆ ಕನ್ನಡದಲ್ಲಿ ಮಾತನಾಡು, ಕನ್ನಡ ಬರಲಿಲ್ಲ ಅಂದ್ರೆ, ನನ್ನ ಅಂಗಡಿ ಕಡೆ ಬರಬೇಡ ಎಂದು ವಾರ್ನಿಂಗ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬರು ಸಣ್ಣ ಟೀ ಸ್ಟಾಲ್ ನಡೆಸುತ್ತಿರುವುದನ್ನು ನೋಡಬಹುದು. ಈ ಸ್ಟಾಲ್ ಗೆ ವ್ಯಕ್ತಿಯೊಬ್ಬನು ಬಂದಿದ್ದಾನೆ. ಪರಭಾಷಾ ವ್ಯಕ್ತಿಯೂ ಕನ್ನಡ ಮಾತನಾಡದೇ ತನ್ನದೇ ಭಾಷೆಯಲ್ಲೇ ಏನನ್ನೋ ಕೇಳಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ, ʼಏಯ್.. ಕನ್ನಡದಲ್ಲಿ ಕೇಳು. ಕನ್ನಡ ಮಾತಾಡೋ ಹಾಗಿದ್ರೆ ಅಂಗಡಿ ಹತ್ರ ಬಾ.. ಇಲ್ಲ ಬರಬೇಡʼ ಎಂದು ಖಡಕ್ ಆಗಿ ಹೇಳಿರುವುದನ್ನು ನೋಡಬಹುದು. ಅಷ್ಟೇ ಅಲ್ಲದೇ ನಾಳೆಯಿಂದ ಕನ್ನಡ ಮಾತನಾಡಿದ್ರೆ ಮಾತ್ರ ಐಟಂ ಇಲ್ಲದಿದ್ರೆ ಇಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾಳೆ. ಈ ವಿಡಿಯೋವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಜೊತೆಗೂ ಮಾತನಾಡಿದ್ದು, ಎಲ್ಲರಿಗೂ ನಾನು ನಿನ್ನೆಯಿಂದ ಅದನ್ನೇ ಹೇಳ್ತಾ ಇರೋದು ಸರ್, ಕನ್ನಡ ಮಾತಾನಾಡಡಿದ್ರೆ ಐಟಂ ಕೊಡುವುದೇ ಇಲ್ಲ ಎಂದಿದ್ದಾರೆ. ಸದ್ಯ ಈ ವೀಡಿಯೋ ನೋಡಿದ ನೆಟ್ಟಿಗರು ಮಹಿಳೆಯ ಕನ್ನಡಾಭಿಮಾನಕ್ಕೆ ನೆಟ್ಟಿಗರು ಮನಸೋತಿದ್ದಾರೆ..