ಬೆಂಗಳೂರು: ವಾಹನಗಳ ದಟ್ಟಣೆ ಹೆಚ್ಚಾದಾಗ ಹಾಗೂ ಟ್ರಾಫಿಕ್ ಹೆಚ್ಚಾದಾಗ ಹಲವರು ಫುಟ್ ಪಾತ್ ನ್ನೇ ರಸ್ತೆ ಮಾಡಿ ನುಗ್ಗುವುದನ್ನು ನೋಡಿದ್ದೇವೆ. ಸದ್ಯ ಇಂತಹ ಫುಟ್ ಪಾತ್ ಸವಾರರಿಗೆ ಶಾಕ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಇನ್ನು ಮುಂದೆ ಫುಟ್ ಪಾತ್ ನಲ್ಲಿ ವಾಹನ ಚಲಾಯಿಸಿದರೆ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಅಮಾನತು ಆಗಲಿದೆ. ಫುಟ್‌ಪಾತ್ ಮೇಲೆ ಬೈಕ್, ಕಾರು ಓಡಿಸುವ ಸವಾರರಿಗೆ ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಡಿಎಲ್ ಅಮಾನತು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ, ಕೇಸ್ ದಾಖಲಿಸಿ ಸೂಕ್ತ ದಂಡ ವಿಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಫುಟ್‌ಪಾತ್ ಪಾದಾಚಾರಿಗಳ ಬಳಕೆಗೆ ಇರುವುದು. ಅದನ್ನು ಸವಾರರು ಬಳಸಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.