ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸತತ ಎಂಟು ಬಜೆಟ್ ಗಳನ್ನು ಮಂಡಿಸುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಭಾರತದ ರಾಜತಾಂತ್ರಿಕ ಇತಿಹಾಸದಲ್ಲೇ ಸತತವಾಗಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಹಣಕಾಸು ಸಚಿವರೆಂಬ ಹೆಗ್ಗಳಿಕೆಗೆ ಅವರದ್ದಾಗಿದೆ. ಈ ದಾಖಲೆ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿತ್ತು.
2019ರ ಬಜೆಟ್:
2019ರಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ಪಿಂಕ್ ಮಂಗಳಗಿರಿ ಸೀರೆ ಉಟ್ಟುಕೊಂಡಿದ್ದರು. ಇದಕ್ಕೆ ಗೋಲ್ಡ್ ಬಾರ್ಡರ್ ಇತ್ತು.
2020ರ ಬಜೆಟ್:
ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು, ಹಳದಿ ರೇಷ್ಮೆ ಸೀರೆಯನ್ನು ಉಟ್ಟಿದ್ದರು. ಇದಕ್ಕೆ ನೀಲಿ ಬಾರ್ಡರ್ ಇತ್ತು.
2021ರ ಬಜೆಟ್:
ಈ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು ತೆಲಂಗಾಣ ರಾಜ್ಯದ ಪೊಚಂಪಳ್ಳಿ ಇಕಟ್ ಸೀರೆಯನ್ನುಟ್ಟು ಗಮನ ಸೆಳೆದಿದ್ದರು. ಈ ಸೀರೆ ಕೆಂಪು, ಕ್ರೀಂ ಹಾಗೂ ಹಸರು ಬಣ್ಣದ ಮಿಶ್ರಣವಾಗಿತ್ತು.
2022ರ ಬಜೆಟ್
2022ರಲ್ಲಿ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು ಕಂದು ಬೊಮ್ಕಿ ಸೀರೆ ಉಟ್ಟು ಗಮನ ಸೆಳೆದಿದ್ದರು. ಇದನ್ನು ಒಡಿಶಾದಲ್ಲಿ ತಯಾರಿಸಲಾಗಿತ್ತು. ಇದರಲ್ಲಿ ಸಿಲ್ವರ್ ಜರಿ ಹಾಗೂ ಆಕರ್ಷಕ ಬಾರ್ಡರ್ ಇತ್ತು.
2023ರ ಬಜೆಟ್:
2023ರ ಬಜೆಟ್ ಮಂಡನೆ ಸಂದರ್ಭದಲ್ಲಿ ಸೀತಾರಾಮನ್ ಅವರು ಗಾಢ ಕೆಂಪು ಬಣ್ಣದ ರೇಷ್ಮೆ ಸೀರೆ ಉಟ್ಟು ಗಮನ ಸೆಳೆದಿದ್ದರು. ಇದರಲ್ಲಿ ಕಪ್ಪು ಹಾಗೂ ಗೋಲ್ಡ್ ಟೆಂಪಲ್ ಬಾರ್ಡರ್ ಇತ್ತು. ಮತ್ತು ಈ ಬಾರ್ಡರ್ ನಲ್ಲಿ ರಥ, ನವಿಲು ಹಾಗೂ ಕಮಲಗಳ ಚಿತ್ತಾರವಿತ್ತು.
2024ರ ಮಧ್ಯಂತರ ಬಜೆಟ್:
ಸಚಿವೆ ಸೀತಾರಾಮನ್ ಅವರು 2024ರ ಫೆ.01ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. ಈ ಸಂದರ್ಭದಲ್ಲಿ ಅವರು ನೀಲಿ ಬಣ್ಣದ ಕೈಮಗ್ಗದ ಟಸ್ಸರ್ ಸಿಲ್ಕ್ ಸೀರೆ ಉಟ್ಟಿದ್ದರು.
2024ರ ಬಜೆಟ್:
2024ರ ಬಜೆಟ್ ವೇಳೆ ಮಂಗಳಗಿರಿ ಸೀರೆ ಉಟ್ಟಿದ್ದರು. ಇದರಲ್ಲಿ ಬ್ರೈಟ್ ಮೆಜೆಂಟಾ ಬಾರ್ಡರ್ ಇತ್ತು. ಈ ಸೀರೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯದ್ದು. ಈ ಸೀರೆ ಸರಳ, ಆಕರ್ಷಕ ನೋಟಕ್ಕೆ ಮತ್ತು ಕ್ಲೀನ್ ಬಾರ್ಡರ್ ಹಾಗೂ ಪ್ಲೈನ್ ಡಿಸೈನ್‌ಗೆ ಹೆಸರುವಾಸಿ.
2025:
ಎಂಟನೇ ಬಜೆಟ್ ಮಂಡನೆ ವೇಳೆ ನಿರ್ಮಲಾ ಅವರು ಮಧುಬನಿ ಸೀರೆಯಲ್ಲಿ ಕಂಗೊಳಿಸಿದರು. ಇದನ್ನು ಅವರಿಗೆ ಪದ್ಮಶ್ರೀ ಪುರಸ್ಕೃತೆ ದುಲಾರಿ ದೇವಿ 2021ರಲ್ಲಿ ಗಿಫ್ಟ್ ಆಗಿ ನೀಡಿದ್ದರು. ಕ್ರೀಂ ಬಣ್ಣದ ಈ ಸೀರೆಯಲ್ಲಿ ಚಿನ್ನದ ಬಾರ್ಡರ್ ಇದ್ದು, ಇದಕ್ಕೆ ಮ್ಯಾಚ್ ಆಗುವಂತೆ ಅವರು ಕೆಂಪು ಕುಪ್ಪಸ ಧರಿಸಿದ್ದರು.