ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ಡಿಮೆರಿಟ್ ಪಾಯಿಂಟ್ಸ್ ಸಿಸ್ಟಮ್ ಅನ್ನು ಪರಿಚಯಿಸಿದೆ. ಇದನ್ನು ನಿಷೇಧಕ್ಕೆ ಬದಲಾಗಿ ಆಟಗಾರರು ತಪ್ಪು ಮಾಡದಂತೆ ಪ್ರೇರೇಪಿಸಲು ಜಾರಿಗೊಳಿಸಲಾಗಿದೆ.
ಆಟಗಾರರು, ಅಧಿಕಾರಿಗಳು ಮತ್ತು ಇತರರ ವರ್ತನೆಯಲ್ಲಿ ಬದಲಾವಣೆ ತರಲು ಬಿಸಿಸಿಐ ಈ ವಿಧಾನವನ್ನು ವಿನ್ಯಾಸಗೊಳಿಸಿದೆ. ಹೊಸ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಡೆಯಿಂದ ಎರವಲು ಪಡೆಯಲಾಗಿದೆ., ಅದನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಬಳಸಲು ತೀರ್ಮಾನಿಸಿದೆ. ಪ್ರಮುಖವಾಗಿ ಸಮಯದ ಚೌಕಟ್ಟಿನಲ್ಲಿ ದಂಡದ ಪ್ರಮಾಣಗಳು ಹೆಚ್ಚಳವಾಗಲಿದೆ.
ಮೂರು ವರ್ಷಗಳ ಋತುವಿಗೆ ಬಳಕೆ
ಐಸಿಸಿ ಡಿಮೆರಿಟ್ ಪಾಯಿಂಟ್ಸ್ ಅನ್ನು ಐದು ವರ್ಷಗಳಿಗೆ ಲೆಕ್ಕಾಚಾರ ಮಾಡಲಾಗುತ್ತದೆ. ಬಿಸಿಸಿಐ ಅದನ್ನು ಐಪಿಎಲ್ನಲ್ಲಿ ಮೂರು ವರ್ಷಗಳಿಗೆ ಬಳಸುತ್ತದೆ. ಪಾಯಿಂಟ್ಗಳ ಸಂಗ್ರಹದ ಮೇಲೆ, ಆಟಗಾರರಿಗೆ ನಿಷೇಧಗಳನ್ನು ನೀಡಲಾಗುತ್ತದೆ. ನಿಷೇಧಗಳಿಗೆ ವಿಭಿನ್ನ ಶ್ರೇಣಿಗಳು ಇರುತ್ತವೆ.
ಉದಾಹರಣೆಗೆ, ಒಬ್ಬ ಆಟಗಾರ ನಾಲ್ಕರಿಂದ ಏಳು ಡಿಮೆರಿಟ್ ಪಾಯಿಂಟ್ಗಳನ್ನು ಪಡೆದರೆ, ಅವರು ಒಂದು ಪಂದ್ಯ ನಿಷೇಧವನ್ನು ಎದುರಿಸುತ್ತಾರೆ. 8ರಿಂದ 11 ಪಾಯಿಂಟ್ಗಳು ಎರಡು-ಮ್ಯಾಚ್ ನಿಷೇಧಕ್ಕೆ ಕಾರಣವಾಗುತ್ತದೆ. 12ರಿಂದ 15 ಪಾಯಿಂಟ್ಗಳನ್ನು ಮೂರು-ಮ್ಯಾಚ್ ನಿಷೇಧಕ್ಕೆ ಕಾರಣವಾಗುತ್ತದೆ. 16 ಅಥವಾ ಹೆಚ್ಚಿನ ಪಾಯಿಂಟ್ಗಳು ಐದು-ಮ್ಯಾಚ್ ನಿಷೇಧಕ್ಕೆ ಕಾರಣವಾಗುತ್ತದೆ. ಇದು ಕ್ರಿಕೆಟ್ ನಿಯಮಗಳ ಆರ್ಟಿಕಲ್ 7.6 ಅಡಿಯಲ್ಲಿ ಬರುತ್ತದೆ.
ವರ್ತನೆ ಬದಲಾವಣೆ ತರಲು ಕ್ರಮ
ನಿಷೇಧದ ಬೆದರಿಕೆಯು ವರ್ತನೆ ಬದಲಾವಣೆ ತರಲು ಪ್ರಬಲ ವ್ಯವಸ್ಥೆ ಎಂದು ಐಪಿಎಲ್ ಆಡಳಿತ ಮಂಡಳಿಯ ನಂಬಿದೆ. ಆದ್ದರಿಂದ ಡಿಮೆರಿಟ್ ಪಾಯಿಂಟ್ಗಳ ವ್ಯವಸ್ಥೆಯನ್ನು ಕೋಡ್ ಆಫ್ ಕಂಡಕ್ಟ್ಗೆ ಸೇರಿಸಲಾಗಿದೆ. ಈ ಮೂಲಕ ಆಟಗಾರರಿಗೆ ಜಾಗ್ರತರಾಗಲು ತಿಳಿಸಲಾಗುತ್ತದೆ.
“ನಿಯಮಗಳ ಅಡಿಯಲ್ಲಿ ಆಟಗಾರ ಅಥವಾ ತಂಡದ ಅಧಿಕಾರಿಯಿಂದ ಪಡೆದ ಡಿಮೆರಿಟ್ ಪಾಯಿಂಟ್ಗಳು ಅವರ ದಾಖಲೆಯಲ್ಲಿ ಮೂವತ್ತಾರು (36) ತಿಂಗಳ ಕಾಲ ಉಳಿಯುತ್ತವೆ. ಡಿಮೆರಿಟ್ ಪಾಯಿಂಟ್ಗಳ ಸಂಗ್ರಹದ ಮೇಲೆ ಆಟಗಾರ ಅಥವಾ ತಂಡದ ಅಧಿಕಾರಿಗೆ ನಿಷೇಧ ಹೇರಲಾಗುತ್ತದೆ. ಇದರ ವಿವರಗಳನ್ನು ನಿಯಮಗಳ ಆರ್ಟಿಕಲ್ 7.6 ಅಡಿಯಲ್ಲಿ ವಿವರಿಸಲಾಗಿದೆ.
ಡಿಮೆರಿಟ್ ಪಾಯಿಂಟ್ಗಳನ್ನು ಹೇಗೆ ವಿಧಿಸಲಾಗುತ್ತದೆ ಎಂಬುದನ್ನೂ ಬಿಸಿಸಿಐ ವಿವರಿಸಿದೆ. ಕೋಡ್ ಆಫ್ ಕಂಡಕ್ಟ್ ಅಡಿಯಲ್ಲಿ ಅಪರಾಧ ಮಾಡಿದ ಆಟಗಾರನಿಗೆ ಒಂದು ಪಾಯಿಂಟ್ ನೀಡಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಉಲ್ಲಂಘನೆಯ ಮಟ್ಟವು ಡಿಮೆರಿಟ್ ಪಾಯಿಂಟ್ಗಳನ್ನು ಸಂಖ್ಯೆಯನ್ನು ನಿರ್ಧರಿಸುತ್ತದೆ.
ನಿಯಮಗಳ ಪ್ರಕಾರ, ಮ್ಯಾಚ್ ಶುಲ್ಕದ 25% ದಂಡವು ಒಂದು ಡಿಮೆರಿಟ್ ಪಾಯಿಂಟ್ ಅನ್ನು ಹೊಂದಿರುತ್ತದೆ. ಲೆವೆಲ್ 2 ಅಪರಾಧವು 3-4 ಡಿಮೆರಿಟ್ ಪಾಯಿಂಟ್ಗಳನ್ನು ಹೊಂದಿರುತ್ತದೆ. ಲೆವೆಲ್ 3 ಅಪರಾಧವು 5-6 ಡಿಮೆರಿಟ್ ಪಾಯಿಂಟ್ಗಳಿಗೆ ಕಾರಣವಾಗುತ್ತದೆ. ಲೆವೆಲ್ 4 ಉಲ್ಲಂಘನೆಯು 7-8 ಡಿಮೆರಿಟ್ ಪಾಯಿಂಟ್ಗಳಿಗೆ ಕಾರಣವಾಗುತ್ತವೆ.
ಮ್ಯಾಚ್ ರೆಫರಿ ಅಥವಾ ಒಂಬ ಅಂಪೈರ್ ಶಿಕ್ಷೆಯನ್ನು ನಿರ್ಧರಿಸುತ್ತಾರೆ. ಅದನ್ನು ನಿರ್ದಿಷ್ಟ ಅವಧಿಗೆ ಅಥವಾ ನಿರ್ದಿಷ್ಟ ಸಂಖ್ಯೆಯ ಮ್ಯಾಚ್ಗಳಿಗೆ ವಿಧಿಸಲಾಗುತ್ತದೆ.