ಬೆಂಗಳೂರು : ಈಗೀಗ ಲೈಫ್‌ನಲ್ಲಿ ಟೆನ್ಶನ್ ಇಲ್ಲ ಅನ್ನೋರು ಸಿಗೋದೆ ಕಷ್ಟ.. ಕಷ್ಟ ಅಲ್ಲ ಸಿಗೋದೆ ಇಲ್ಲ. ಇದೀಗ ಈ ಟೆನ್ಶನ್ ಎನ್ನುವುದನ್ನೇ ಹೈಲೇಟ್ ಮಾಡಿಕೊಂಡು ‘ಟೆನ್ಶನ್ ಟೆನ್ಶನ್’ ಎಂಬ ಕನ್ನಡ ಆಲ್ಬಂ ಸಾಂಗೊಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಿದೆ.

ಹೌದು.. MNCಯಲ್ಲಿ ಕೆಲಸ ಮಾಡ್ತಿರೋರ ದಿನಚರಿ ಮತ್ತು ಖಾಸಗಿ ಬದುಕನ್ನೇ ಆಧರಿಸಿರುವ ಈ ‘ಟೆನ್ಶನ್ ಟೆನ್ಶನ್’ ಕನ್ನಡ ಆಲ್ಬಂ ಸಾಂಗ್ ತುಂಬಾ ರಿಯಲಿಸ್ಟಿಕ್ ಆಗಿ ಮೂಡಿಬಂದಿದೆ.ಅಪರೂಪದ ಈ ಹಾಡೊಂದನ್ನ ಕರ್ನಾಟಕ ನ್ಯೂಸ್ ಬೀಟ್ ವಾಹಿನಿ ಮೂಲಕ ನಿಮ್ಮ ಮುಂದೆ ಪ್ರಸ್ತುತಪಡಿಸ್ತಿದೆ.
ಗಿರೀಶ್ ಕೃಷ್ಣಾ ಅಲಿಯಾಸ್ ಚೆರಿತ್ ಸಾಹಿತ್ಯ ಬರೆದು ನಿರ್ದೇಶಿಸಿರುವ ಟೆನ್ಶನ್ ಸಾಂಗ್, ಕರ್ನಾಟಕ ನ್ಯೂಸ್ ಬೀಟ್‌ನ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.ನೋಡುಗರಿಗೆ ಡಿಪ್ರೆಂಟ್ ಅನುಭವವನ್ನ ಕೊಡ್ತಾ ಇದೆ.ಅದರಲ್ಲೂ ಸುದ್ದಿವಾಹಿನಿಯಲ್ಲಿ ಆಲ್ಬಂ ಸಾಂಗ್ ಬಿಡುಗಡೆಯಾಗುತ್ತಿರುವುದು ಒಂದು ಹೊಸ ಪ್ರೇರಣೆಗೆ ದಾರಿ ಮಾಡಿಕೊಟ್ಟಿದ್ದು, ಹೊಸ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸೋ ನಿಟ್ಟಿನಲ್ಲೇ ಕರ್ನಾಟಕ ನ್ಯೂಸ್ ಬೀಟ್ ಸುದ್ದಿವಾಹಿನಿ ಈ ಕೆಲಸಕ್ಕೆ ಕೈ ಹಾಕಿದೆ.

ಚೆರಿತ್ 2 ವರ್ಷಗಳ ಪ್ರಯತ್ನಕ್ಕೆ ‘ನಿಲ್ಲಿಸೋಕಾಗಲ್ಲ’ ಮೇಕರ್ಸ್ ಸಾಥ್ ನೀಡಿದ್ದು, ನಿಕ್ಷೇಪ್ ಗೌಡ ಮ್ಯೂಸಿಕ್ ಕಂಪೋಸ್, ಸಾಗರ ಜಿ ಆರ್ ಪರ್ಫೆಕ್ಟ್ ಕ್ಯಾಪ್ಚರ್ ಮಾಡಿದ್ದಾರೆ. MNCಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ದಿನಚರಿ, ಕಷ್ಟ-ನಷ್ಟ ಹಾಗೂ ಅವರ ಖಾಸಗಿ ಬದುಕಿನ ಶೈಲಿ ಸಾಂಗ್‌ನಲ್ಲಿದ್ದು, ‘ಎಂಥ ಬಾಳು ನಮ್ದು’ ಅಂತಾನೇ ಐಟಿ-ಬಿಟಿ ಗಮನ ಸೆಳೆದಿದೆ. ಮತ್ತೆ ಇನ್ಯಾಕೆ ತಡ ಬೇಗ ಹೋಗಿ ಕರ್ನಾಟಕ ನ್ಯೂಸ್ ಬೀಟ್ ಯೂಟ್ಯೂಬ್ ಚಾನೆಲ್ ಒಪನ್ ಮಾಡಿ ಸಾಂಗ್ ನೋಡಿ ಎಂಜಾಯ್ ಮಾಡಿ.
ಇದನ್ನೂ ಓದಿ : ಏಷ್ಯಾ ಕಪ್ ಟ್ರೋಫಿ ವಿವಾದ ಅಂತ್ಯ? ಶೀಘ್ರದಲ್ಲೇ ಭಾರತಕ್ಕೆ ಟ್ರೋಫಿ?



















