ಮಂಡ್ಯ : ಯುವಕರಿಗೆ ಮಂಡ್ಯ ನಗರದ ಚಿತ್ರಣ ತೋರಿಸುವ ನಿಟ್ಟಿನಲ್ಲಿ ಹೆಲಿಟೂರಿಸಂ ನಡೆಸಲಾಗುತ್ತಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಇಂದು ಮಂಡ್ಯದಲ್ಲಿ ಹೆಲಿಕ್ಯಾಪ್ಟರ್ ರೈಡ್‌ಗೆ ಚಾಲನೆ ನೀಡಿ ಬಳಿಕ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಬೂದನೂರು ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿ ವಿಶೇಷವಾಗಿ ಯುವಕರಿಗೆ ಮಂಡ್ಯ ನಗರ ಚಿತ್ರಣ ತೋರಿಸುವ ನಿಟ್ಟಿನಲ್ಲಿ ಹೆಲಿಟೂರಿಸಂ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಎರಡೂ ದಿನಗಳ ಕಾಲ ಬೂದನೂರು ಗ್ರಾಮದಲ್ಲಿ ನಡೆಯುವ ಈ ಉತ್ಸವಕ್ಕೆ ನಾಳೆ ಚಾಲನೆ ಸಿಗಲಿದೆ. ಹಂಪಿ, ಕನಕೋತ್ಸವ ಹೊಸದಾಗಿ ನಡೆಯುತ್ತಿಲ್ಲ ಹಿಂದಿನಿಂದಲೂ ನಡೆಯುತ್ತಿದೆ. ಬೂದನೂರು ಉತ್ಸವ ಕೂಡ ಹಾಗೇ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇನ್ನು, ಇದೇ ಸಂಧರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರ ಟೇಕ್ ಆಫ್ ಆಗಿದೆ, ಇಲ್ಲ ಅನ್ನೋದನ್ನ ಯಾವ ರೀತಿ ಮಾನದಂಡದಲ್ಲಿ ಅಳೆಯೋದು? ಕಳೆದ ಐದು ವರ್ಷದಲ್ಲಿ ಮೂರು ಮುಖ್ಯಮಂತ್ರಿ ಕಾಲದಲ್ಲಿ ಏನು ಅಭಿವೃದ್ಧಿ ಆಗಿದೆ? ಎಲ್ಲವನ್ನೂ ಪಟ್ಟಿ ಮಾಡಿ ನೋಡಿ. ಇವಾಗ ಏನು ಅಭಿವೃದ್ಧಿ ಆಗಿದೆ ಟ್ಯಾಲಿ ಮಾಡಿ. ಅವಾಗ ನಾವು ಒಪ್ಪಿಕೊಳ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ‘ಸಿಎಂ ಕಪ್’ ಬ್ಯಾಡ್ಮಿಂಟನ್ ಟೂರ್ನಿಗೆ ಕ್ಷಣಗಣನೆ.. 2 ದಿನಗಳ ಕ್ರೀಡಾ ಸಂಭ್ರಮಕ್ಕೆ ವೇದಿಕೆ ಸಜ್ಜು!



















