ಕರಾವಳಿಯಲ್ಲಿ ಬಿಟ್ಟೂ ಬಿಡದೆ ವರ್ಷಧಾರೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಮಂಗಳೂರಿನಲ್ಲಿ ಗೋಡೆ ಕುಸಿದು ಅವಾಂತರ ಸೃಷ್ಟಿಸಿದೆ. ಇಲ್ಲಿನ ಮೇರಿ ಹಿಲ್ ಪ್ರದೇಶದಲ್ಲಿ ಕಾಂಪೌಂಡ್ ಕುಸಿದ ಪರಿಣಾಮ ಹತ್ತಾರು ವಾಹನಗಳು ಜಖಂಗೊಂಡಿವೆ.
ಇಲ್ಲಿನ ಕೆನರಾ ವಿಕಾಸ್ ಕಾಲೇಜು ಬಳಿ ದುರ್ಘಟನೆ ನಡೆದಿದ್ದು, ಗ್ಯಾರೇಜ್ ಹೊರ ಭಾಗದಲ್ಲ ನಿಲ್ಲಿಸಿದ್ದ ವಾಹನಗಳೆಲ್ಲಾ ಜಖಂಗೊಂಡಿವೆ. ಗೋಡೆ ಕುಸಿತದಿಂದಾಗಿ 15ಕ್ಕೂ ಹೆಚ್ಚು ವಾಹನಗಳು ಹಾನಿಯಾಗಿವೆ. ಬೈಕ್ ಗಳು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮಾಲೀಕರು ಕಂಗಲಾಗಿದ್ದಾರೆ.



















