ಚಿಕ್ಕೋಡಿ : ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿದ್ದ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಉಗಾರಖುರ್ದ್ ಮದ್ಯದ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿಮುಳುಗಡೆಯಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾಗಿರೋ ಸೇತುವೆ ಇದಾಗಿದ್ದು, ನಿತ್ಯ ನೂರಾರು ಬಸ್ ಹಾಗೂ ವಾಹನಗಳು ಓಡಾಡುವ ಪ್ರಮುಖ ರಾಜ್ಯ ಹೆದ್ದಾರಿಯಾಗಿತ್ತು.
ಸದ್ಯ ಕೃಷ್ಣ ನದಿಗೆ 1 ಲಕ್ಷ 35 ಸಾವಿರ ಕ್ಯೂಸೇಕ್‌ನಷ್ಟು ಒಳಹರಿವು ನೀರು ಹೆಚ್ಚಳವಾಗಿದ್ದು, ಸೇತುವೆ ಬಳಿ ಕುಡಚಿ ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.