ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ವರುಣನ ಅಬ್ಬರಕ್ಕೆ ಹಲವೆಡೆ ಬೆಳೆಗಳು ಕೊಚ್ಚಿಹೋಗಿವೆ.
ಮೆಕ್ಕೆಜೋಳ, ಈರುಳ್ಳಿ, ಶೆಂಗಾ ಸೇರಿ ಹಲವು ಬೆಳೆ ನೀರು ಪಾಲಾಗಿದೆ. ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದಲ್ಲಿ ಈರುಳ್ಳಿ, ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ರಾಜಣ್ಣ ಎಂಬುವವರಿಗೆ ಸೇರಿದ 9 ಎಕರೆ ಈರುಳ್ಳಿ, ಮೆಕ್ಕೆಜೋಳ ನೀರು ಪಾಲಾಗಿದೆ.

ಸುರಿದ ಬಾರಿ ಮಳೆಗೆ ತುಂಬಿ ಹರಿಯುತ್ತಿರುವ ಮೊಳಕಾಲ್ಮೂರು ತಾಲ್ಲೂಕಿನ ಪಕುರ್ತಿ ಕೆರೆ ಭರ್ತಿಯಾಗಿ ಅಪಾರ ನೀರು ಹೊರಗೆ ಹರಿಯುತ್ತಿದೆ. ಸತತ ಮಳೆಯಿಂದ ಚಿನ್ನಹಗರಿ ಹಳ್ಳ ಭರ್ತಿಯಾಗಿ ಹರಿಯುತ್ತಿದೆ. ದೊಡ್ಡೇರಿ ಗ್ರಾಮದ ಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬರದ ಛಾಯೆಯ ನಡುವೆ ಸುರಿದ ಭಾರೀ ಮಳೆಗೆ ರೈತರ ಮೊಗದಲ್ಲಿ ಮಂದಹಾಸ ವ್ಯಕ್ತವಾಗಿದೆ.
ಹಿರಿಯೂರಿನ ಆದಿವಾಲ ಫಾರಂ2 ಕಾಲೋನಿಯಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ ಜನ- ಜೀವನ ಅಸ್ತವ್ಯಸ್ತವಾಗಿದೆ. ವ್ಯವಸ್ಥೆ ಕಲ್ಪಿಸಲು ಜನರು ಮನವಿ ಮಾಡಿಕೊಂಡಿದ್ದಾರೆ.