ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಯುಮುನಾ ನದಿಯ ಅಬ್ಬರ ಜೋರಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ನಿನ್ನೆ (ಗುರುವಾರ, ಸೆ.04) ಯಮುನಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಸದ್ಯ 207 ಮೀಟರ್‌ಗೆ ತಲುಪಿದೆ. ನದಿಗೆ ಮೂರು ಬ್ಯಾರೇಜ್‌ಗಳಿಂದ ನೀರು ಹರಿಸುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಏಕಾಏಕಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಸುತ್ತಮುತ್ತಲಿನ ಪ್ರದೇಶಗಳಾದ ಐಎಸ್‌ಬಿಟಿ ಕಾಶ್ಮೀರಿ ಗೇಟ್, ಮಯೂರ್ ವಿಹಾರ, ಶಾಸ್ತ್ರ ಪಾರ್ಕ್, ಕುಸ್ತಾ ರೋಡ್, ನೋಯ್ಡಾ, ಗಾಜೀಯಬಾದ್ ಒಳಗೊಂಡಂತೆ ಹಲವೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಶುಕ್ರವಾರವೂ (ಸೆ.5) ಕೂಡ ದೆಹಲಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಇನ್ನೂ ಗುರುಗ್ರಾಮ್, ಫರಿದಾಬಾದ್, ಯಮುನಾನಗರ, ಮೇವಾತ್, ಪಲ್ವಾಲ್, ರೇವಾರಿ ಮತ್ತು ಮಹೇಂದ್ರಗಢ ಪ್ರವೇಶಗಳಲ್ಲಿ ಮಳೆ ಎಚ್ಚರಿಕೆ ನೀಡಿದ್ದು, ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.