ಶಿವಮೊಗ್ಗ: ಜಿಲ್ಲೆಯಲ್ಲಿ ವರ್ಷದ ಮೊದಲ ವರ್ಷಧಾರೆಯಾಗಿದ್ದು, ಕೆಲವೆಡೆ ಜನ- ಜೀವನ ಅಸ್ತವ್ಯಸ್ಥಗೊಂಡಿದೆ.
ಮಲೆನಾಡಿನಲ್ಲಿ ಗುರುವಾರ ಸುರಿದ ಭಾರೀ ಮಳೆಗೆ ಮನೆಯ ಮೇಲಿನ ಹೆಂಚುಗಳು ಹಾರು ಹೋಗಿವೆ. ಈ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸಂಜೆ ಭಾರೀ ವರ್ಷಧಾರೆಯಾಗಿದೆ. ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ ಭಾಗದಲ್ಲಿ ಗುಡುಗು ಸಿಡಿಲಿನ ಜೊತೆಗೆ ಭಾರೀ ಮಳೆಯಾಗಿದೆ. ಮಳೆಯ ಹಾಗೂ ಗಾಳಿಯ ರಭಸಕ್ಕೆ ಮನೆಯ ಮೇಲಿನ ಹೆಂಚುಗಳು ಹಾರಿ ಹೋಗಿವೆ.
ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣನ ಸಿಂಚನ ತುಸು ನೆಮ್ಮದಿ ನೀಡಿದೆ. ಅಲ್ಲದೇ, ಭೂತಾಯಿಯ ಒಡಲನ್ನು ತಂಪು ಮಾಡಿದೆ.