ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನಗರದ ಹಲವೆಡೆ ಧಾರಾಕಾರವಾಗಿ ಭಾರಿ ಮಳೆಯಾಗುತ್ತಿದೆ. ಹೆಬ್ಬಾಳ, ಆರ್ ಟಿ ನಗರ, ಗಂಗಾನಗರ, ಸಿಬಿಐ, ಸದಾಶಿವನಗರ ಸೇರಿದಂತೆ ಹಲವಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಬದಿಗಳಲ್ಲಿರುವ ಮರಗಳು, ಬಸ್ ನಿಲ್ದಾಣಗಳಲ್ಲಿ, ಫ್ಲೈಓವರ್ ಕೆಳಗಡೆ ಬೈಕ್ ಸವಾರರು ನಿಂತಿರುವ ದೃಶ್ಯ ಕಂಡು ಬಂತು.