ಬೆಂಗಳೂರು: ಕಾರಿನ ಸನ್ ರೂಪ್ ಓಪನ್ ಮಾಡಿಕೊಂಡು ಜಾಲಿ ರೈಡ್ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕಾರಿನ ಸನ್ ರೂಪ್ ಓಪನ್ ಮಾಡಿಕೊಂಡು ಮಕ್ಕಳು ಸೇರಿದಂತೆ ಮೂವರು ನಿಂತು ಜಾಲಿ ರೈಡ್ ಮಾಡಿದ್ದಾರೆ. ನಗರದ ಆರ್.ಟಿ. ನಗರದ ಸಿಬಿಐ ರಸ್ತೆಯಲ್ಲಿ ಜಾಲಿ ರೈಡ್ ಹೋಗುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು, ಕಾರು ಸೀಜ್ ಮಾಡಿದ್ದಾರೆ. ಸೋಮವಾರ ಈ ರೀತಿ ಜಾಲಿ ರೈಡ್ ನಡೆಸಿದ್ದಾರೆ ಎನ್ನಲಾಗಿದೆ.
ಕಾರು ಸೀಜ್ ಮಾಡಿದ ಪೊಲೀಸರು, ಕಾರು ಮಾಲೀಕನಿಗೆ ದಂಡ ವಿಧಿಸಿದ್ದಾರೆ. ಅಲ್ಲದೇ, ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.